ಮಡಿಕೇರಿ: ವಾರಾಂತ್ಯವಾದ ಶನಿವಾರ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನೂರಾರು ಮಂದಿ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಂಭ್ರಮಿಸಿದರು. ವಿವಿದ ಬಗೆಯ ಕ್ರೀಡೆಗಳಲ್ಲಿ ಪಾಲ್ಗೊಂಡ ಅವರು ಕೆಸರಿನಲ್ಲಿ ಮಿಂದೆದ್ದು ಖುಷಿಪಟ್ಟರು. ಇಂತಹದ್ದೊಂದು ಸಂಭ್ರಮದ ಕ್ಷಣಗಳಿಗೆ ಮಳೆಯೂ ಅಡ್ಡಿಪಡಿಸದೇ ಆಸ್ಪದ ನೀಡಿತು. ಎಲ್ಲೆಡೆ ಸಂಭ್ರಮ ಮೇರೆ ಮೀರಿತ್ತು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಮಡಿಕೇರಿ ಘಟಕ) ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ವತಿಯಿಂದ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಶನಿವಾರ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ನಡೆದ 32ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಂತಸ ಸಡಗರಗಳು ಮೇಳೈಸಿದ್ದವು.
ಶಾಸಕರ, ಸಂಸದರು, ಸಚಿವರು ಬಾರದೇ ಹೋದರೂ, ಸಂಭ್ರಮ ಕಡಿಮೆಯಾಗಿರಲಿಲ್ಲ. ಎಲ್ಲರ ಗೈರನ್ನೂ ಮರೆಸಿದ ಈ ಸಂಭ್ರಮದ ಕ್ರೀಡಾಕೂಟ ಎಲ್ಲರನ್ನೂ ರಂಜಿಸಿತು.
ಕ್ರೀಡಾಕೂಟದ ಫಲಿತಾಂಶ
ಹಗ್ಗಜಗ್ಗಾಟ
ಪುರುಷರ ವಿಭಾಗ: ಕಾಫಿ ಲಿಂಕ್ಸ್ ಮದೆನಾಡು (ಪ್ರಥಮ), ಬಿ.ಸಿ.ರೋಡ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ (ದ್ವಿತೀಯ)
ಮಹಿಳೆಯರ ವಿಭಾಗ: ಸುಳ್ಯದ ನಾಗಶ್ರೀ (ಪ್ರಥಮ), ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ (ದ್ವಿತೀಯ)
ಪ್ರೌಢಶಾಲಾ ಬಾಲಕರ ವಿಭಾಗ: ಮೂರ್ನಾಡುವಿನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಮೂರ್ನಾಡುವಿನ ಸರ್ಕಾರಿ ಪ್ರೌಢಶಾಲೆ (ದ್ವಿತೀಯ)
ವಾಲಿಬಾಲ್ (ಸಾರ್ವಜನಿಕ ವಿಭಾಗ): ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ (ಪ್ರಥಮ), ಸಿದ್ದಾಪುರದ ಟಿ.ಕೆ.ರ‍್ಯಾಂಬೊ (ದ್ವಿತೀಯ)
ಥ್ರೋಬಾಲ್ (ಮಹಿಳೆಯರು, ಬಾಲಕಿಯರ ವಿಭಾಗ): ಕಟ್ಟೆಮಾಡುವಿನ ಬ್ಲಾಕ್ ಪ್ಯಾಂಥರ್ಸ್ (ಪ್ರಥಮ), ಮೂರ್ನಾಡುವಿನ ಜ್ಞಾನಜ್ಯೋತಿ (ದ್ವಿತೀಯ)
50 ಮೀಟರ್ ಓಟ
ಕಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಟಿರಿನ್ (ಪ್ರಥಮ), ಎನ್.ಕಾರ್ಯಪ್ಪ (ಪಟ್ಟಮಾಡ) (ದ್ವಿತೀಯ), ಚಮನ್ ಚಂಗಪ್ಪ (ತೃತೀಯ)
ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಯು.ಪಿ.ಅನನ್ಯಾ (ಪ್ರಥಮ), ಪ್ರಜ್ಞಾ (ದ್ವಿತೀಯ), ಚೈತನ್ಯ ಕಾವೇರಿಮನೆ (ತೃತೀಯ)
100 ಮೀಟರ್ ಓಟ
ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಲೇಖನ್ ಕುಡುಪಜೆ (ಪ್ರಥಮ), ವೈ.ಕೆ.ದರ್ಶನ್ (ದ್ವಿತೀಯ), ಜನಿತ್ ಬೋಪಣ್ಣ (ತೃತೀಯ)
ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ದೇರಜೆ ದೀಪಿಕಾ (ಪ್ರಥಮ), ಟಿಯನಾ ಕಾವೇರಮ್ಮ (ದ್ವಿತೀಯ), ಎಂ.ಎಂ.ಯೋಗೇಶ್ವರಿ (ತೃತೀಯ)
200 ಮೀಟರ್ ಓಟ
ಪ್ರೌಢಶಾಲಾ ಬಾಲಕರ ವಿಭಾಗ: ಹರ್ಷ ಗುಡ್ಡೆಮನೆ (ಪ್ರಥಮ), ಮಹಮ್ಮದ್ ಫಹದ್ (ದ್ವಿತೀಯ), ನಿತೇಶ್ ನಂಜಪ್ಪ (ತೃತೀಯ)
ಪ್ರೌಢಶಾಲಾ ಬಾಲಕಿಯರ ವಿಭಾಗ: ಸುಳ್ಯದ ಬಿ.ಬಿ.ವಿನೀತಾ (ಪ್ರಥಮ), ಕೆ.ಆರ್.ಯಶಿತಾ (ದ್ವಿತೀಯ), ತೇಜಲ್ ಬೋಪಣ್ಣ (ತೃತೀಯ)
400 ಮೀಟರ್ ಓಟ
ಪದವಿಪೂರ್ವ ಕಾಲೇಜು ಬಾಲಕರ ವಿಭಾಗ: ಪುತ್ತೂರಿನ ಮುರುಳಿ (ಪ್ರಥಮ), ಬೆಳ್ತಂಗಡಿಯ ಪುಷ್ಪರಾಜ್ (ದ್ವಿತೀಯ), ಜನಿತ್ ಬೋಪಣ್ಣ (ತೃತೀಯ)
ಪದವಿಪೂರ್ವ ಕಾಲೆಜು ಬಾಲಕಿಯರ ವಿಭಾಗ: ಭವಿಷ್ಯ ಕಾಕೇರ (ಪ್ರಥಮ), ನೆರವಂಡ ಅದಿತಿ ಗಂಗಮ್ಮ (ದ್ವಿತೀಯ), ಮೇಕಂಡ ಅಭಿಷ್ ಉದಯ (ತೃತೀಯ)
ಪದವಿ ಕಾಲೇಜು ಬಾಲಕರ ವಿಭಾಗ: ಪುತ್ತೂರಿನ ಜಯಕರ ಕಡಬ (ಪ್ರಥಮ), ಶೃಜನ್ ಬಿದ್ದಂಡ (ದ್ವಿತೀಯ), ಪ್ರತಾಪ್ ಕುದುಪಜೆ (ತೃತೀಯ)
ಪದವಿ ಕಾಲೇಜು ಬಾಲಕಿಯರ ವಿಭಾಗ: ಪುತ್ತೂರಿನ ಭುವನ ಕಡಬ (ಪ್ರಥಮ), ಭೂಮಿಕಾ ರಮೇಶ (ದ್ವಿತೀಯ), ನಿಸಾ ರಾಘವ (ತೃತೀಯ)
ಮುಕ್ತ ಓಟ
ಪುರುಷರ ವಿಭಾಗ: ಪುತ್ತೂರಿನ ಮುರುಳಿ (ಪ್ರಥಮ), ಬೆಳ್ತಂಗಡಿಯ ಪುಷ್ಪರಾಜ್ (ದ್ವಿತೀಯ), ಮುರಳಿ (ತೃತೀಯ)
ಮಹಿಳೆಯರ ವಿಭಾಗ: ಎಸ್.ಎನ್.ಜಿನಿತಾ (ಪ್ರಥಮ), ಭವಿಷ್ಯಾ ಕಾಕೇರ (ದ್ವಿತೀಯ), ಕಡಬದ ಭುವನ (ತೃತೀಯ)
ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ಓಟ
ಮಧು (ಪ್ರಥಮ), ಮಂದ್ರಿರ ಕೇಶವ (ದ್ವಿತೀಯ), ಪ್ರೀತಂ ಪೆರೇರಾ (ತೃತೀಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.