ಮಡಿಕೇರಿ: ಇಲ್ಲಿನ ಮಕ್ಕಂದೂರಿನಲ್ಲಿ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿ ಪಿ.ಆರ್.ಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 3 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಇತರೆ ಇಬ್ಬರೊಂದಿಗೆ ಸೇರಿ ಮಕ್ಕಂದೂರಿನ ಖಾಸಗಿ ಜಮೀನಿನಲ್ಲಿದ್ದ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದಾಗ ದೊರೆತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಇಬ್ಬರು ಪರಾರಿಯಾದರು. ಪ್ರಮುಖ ಆರೋಪಿ ಪ್ರಸಾದ್ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಎಂ.ಕೆ.ಮಧುಸೂದನ್, ಡಿಆರ್‌ಎಫ್‌ಒಗಳಾದ ಬಾಬು ರಾಥೋಡ್, ಸಚಿನ್, ಅರಣ್ಯ ರಕ್ಷಕರಾದ ಯು.ಆರ್.ಸಂದೇಶ್, ಯತೀಶ್, ವಾಸುದೇವ, ಸಿಬ್ಬಂದಿಯಾದ ಅಜಿತ್, ಮೋಹನ್, ಮಹೇಶ್, ಅನಿಲ್, ನವೀನ್ ಇದ್ದರು.
’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.