ADVERTISEMENT

ಕೊಡಗು: ‘ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ಗೆ ಆಯ್ಕೆ‘

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 14:36 IST
Last Updated 18 ಜನವರಿ 2024, 14:36 IST
ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ಗೆ ಆಯ್ಕೆಯಾದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲ ಎಸ್.ಎಸ್, ಮಾದಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಸಂತೋಷ್ ಪಾಲ್ಗೊಂಡಿದ್ದಾರೆ
ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ಗೆ ಆಯ್ಕೆಯಾದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲ ಎಸ್.ಎಸ್, ಮಾದಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಸಂತೋಷ್ ಪಾಲ್ಗೊಂಡಿದ್ದಾರೆ   

ಗೋಣಿಕೊಪ್ಪಲು: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಜ. 26ರಿಂದ 28 ರವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ತಂಡವನ್ನು ಕೊಡಗಿನ ಮೂವರು ವಿದ್ಯಾರ್ಥಿಗಳು ಪ್ರತಿನಿಧಿಸಲಿದ್ದಾರೆ.

ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಬಲ್ಯಮಂಡ ವಿಕಾಸ್ ಕುಶಾಲಪ್ಪ, ಕುಞಠಡ ರಿವಿನ್ ನಾಣಯ್ಯ, ಮಾಚಿಮಡ ಚಿರಾಲ್ ನರೇಂದ್ರ ಪ್ರತಿನಿಧಿಸುವವರು.

‘ಈ ವಿದ್ಯಾರ್ಥಿಗಳಿಗೆ ಸೌತ್ ಇಂಡಿಯಾ ಫ್ಲೋರ್‌ಬಾಲ್ ಅಸೋಸಿಯೇಷನ್‌ನ ನಿರ್ದೇಶಕ ಮಿನ್ನಂಡ ಜೋಯಪ್ಪ ತರಬೇತಿ ನೀಡುತ್ತಿದ್ದಾರೆ’ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಟಿ. ಸಂತೋಷ್ ಹಾಗೂ ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.