ADVERTISEMENT

ಸುಂಟಿಕೊಪ್ಪ | ಆಯುಧಪೂಜಾ ಅಲಂಕಾರ: ಸೆಸ್ಕ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:24 IST
Last Updated 17 ಅಕ್ಟೋಬರ್ 2024, 16:24 IST
ಗೋಣಿಕೊಪ್ಪಲು ಬಳಿಯ ಬಲ್ಯಮಂಡೂರು– ಹರಿಹರ ನಡುವಿನ ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು
ಗೋಣಿಕೊಪ್ಪಲು ಬಳಿಯ ಬಲ್ಯಮಂಡೂರು– ಹರಿಹರ ನಡುವಿನ ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು   

ಸುಂಟಿಕೊಪ್ಪ: ಇಲ್ಲಿನ ವಾಹನ ಚಾಲಕರ ಸಂಘದ 54ನೇ ವರ್ಷದ ಆಯುಧ ಪೂಜಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಅಲಂಕಾರಗಳ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.

ವರ್ಕ್ ಶಾಪ್ ಅಲಂಕಾರ: ಪ್ರಭ ಆಟೊ ವರ್ಕ್ಸ್ (ಪ್ರಥಮ), ಶಬರಿ ಆಟೊ ವರ್ಕ್ಸ್ (ದ್ವಿತೀಯ), ಪ್ರದಿ ಟಯರ್ ವರ್ಕ್ಸ್ (ತೃತೀಯ).

4 ಚಕ್ರ ವಾಹನ ಅಲಂಕಾರ: ಆನಂದ ಗಿರಿಯಪ್ಪ ಮನೆ (ಪ್ರ), ನಾಗಪ್ಪ ಗದ್ದೆಹಳ್ಳ (ದ್ವಿ), ನಿಖಿಲ್‌ ಸುಂಟಿಕೊಪ್ಪ (ತೃ).

ADVERTISEMENT

ಕಚೇರಿ, ಸಂಘ ಸಂಸ್ಥೆಗಳ ಅಲಂಕಾರ: ಅಂಧಕಾಸುರ ಸಂಹಾರದ ಕಥಾ ಸಾರಾಂಶವನ್ನೊಳಗೊಂಡ ಚಲನವಲನ ವನ್ನು ಹೊಂದಿದ್ದ ಸೆಸ್ಕ್ ಇಲಾಖೆ ಪ್ರಥಮ, ತ್ರಿಪುರಾಸುರ ಸಂಹಾರ ಕಥಾ ಸಾರಾಂಶದ ಚಲನ ವಲನ ಹೊಂದಿದ್ದ ಪೊಲೀಸ್ ಠಾಣೆ ದ್ವಿತೀಯ, ಗ್ರಾಮ ಪಂಚಾಯಿತಿ ತೃತೀಯ.

ಆಟೊ ರಿಕ್ಷಾ ಅಲಂಕಾರ: ಜೀವನ್ (ಪ್ರಥಮ) , ಜೀವನ್ (ಅವಲಸ್) ದ್ವಿತೀಯ, ಸಾಬು ತೃತೀಯ.

ಅಂಗಡಿ ಅಲಂಕಾರ: ಭ್ರಮರಾಂಬಿಕೆ ಅವತಾರದ ಕಥೆಯ ಶ್ರೀಮಾನ್ ಎಂಟರ್‌ಪ್ರೈಸಸ್ ಪ್ರಥಮ, ಹೆಮ್ಮರ‌ ಎಂಜಿನಿಯರಿಂಗ್ ವರ್ಕ್ಸ್ ದ್ವಿತೀಯ, ಸ್ಟೂಡೆಂಟ್ ಕಾರ್ನರ್ ತೃತೀಯ.

ಮಕ್ಕಳ‌ ಮಂಟಪ: ಪಂಪ್ ಹೌಸ್ ಮಕ್ಕಳು ಪ್ರ‌‌ಥಮ ಬಹುಮಾನ‌ ಪಡೆದುಕೊಂಡರು.

ವಿಜೇತರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಜಿಲ್ಲಾ‌‌ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕೃಷ್ಣಪ್ಪ‌ ಪೂಜಾರಿ, ಅವಲಕುಟ್ಟಿ, ರಕ್ಷಿತ್ ಇತರರು ಬಹುಮಾನ ವಿತರಿಸಿದರು.

ರಸ್ತೆಬದಿ ಗಿಡಗಂಟಿ ತೆರವು

ಗೋಣಿಕೊಪ್ಪಲು: ವಾಹನ ಸವಾರರಿಗೆ ತೀವ್ರ ಅಡ್ಡಿಯಾಗಿದ್ದ ಪೊನ್ನಂಪೇಟೆ ತಾಲ್ಲೂಕಿನ ಹರಿಹರ- ಬಲ್ಯಮುಂಡೂರು ರಸ್ತೆ ಬದಿಯ ಗಿಡಗಂಟಿಗಳನ್ನು ಗ್ರಾಮ ಪಂಚಾಯಿತಿಯಿಂದ ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪೊನ್ನಂಪೇಟೆ ಕಾನೂರು ರಸ್ತೆಯಿಂದ ಬಲಕ್ಕೆ ತಿರುಗಿ ಬಲ್ಯಮಂಡೂರು, ಹರಿಹರಕ್ಕೆ ಸೇರುವ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ಎದುರಿಗೆ ಬರುವ ವಾಹನಗಳು ಚಾಲಕರಿಗೆ ಮತ್ತು ಬೈಕ್ ಸವಾರರಿಗೆ ಗೊತ್ತೇ ಆಗುತ್ತಿರಲಿಲ್ಲ. ಇದರಿಂದ ಹಲವು ಅಪಘಾತಗಳಿಗೂ ಕಾರಣವಾಗಿತ್ತು.

ಈ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದ ಕೂಡಲೇ ಅವರು ಸ್ಥಳೀಯ ಗ್ರಾಮ ಪಂಚಾಯಿತಿಗೆ ತಿಳಿಸಿ ರಸ್ತೆಬದಿಯ ಗಿಡಗಂಟಿಗಳು, ಹುಲ್ಲನ್ನು ತೆಗೆಸಿ ಸ್ವಚ್ಚಗೊಳಿಸಲಾಯಿತು. ರಸ್ತೆಯ ಎರಡು ಬದಿಯಲ್ಲಿ ಬಾಗಿದ್ದ ಮರದ ರೆಂಬೆಗಳನ್ನು ಕಡಿದು ರಸ್ತೆಯನ್ನು ವಿಶಾಲಗೊಳಿಸಲಾಯಿತು. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟು ವಾಹನ ಓಡಿಸುತ್ತಿದ್ದಾರೆ ಎಂದು ಸ್ಥಳೀಯರಾದ ಪೊನ್ನಪ್ಪ ತಿಳಿಸಿದರು.

ನಾಪೋಕ್ಲು ಲಯನ್ಸ್ ಕ್ಲಬ್‌ ಮಹಿಳಾ ಸಮಾಜ ಮತ್ತು ಗಾಯತ್ರಿ ಮಹಿಳಾ ಸಂಘದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಿತು

ಲಯನ್ಸ್ ಕ್ಲಬ್‌ನಿಂದ ಸ್ವಚ್ಛತಾ ಕಾರ್ಯ

ನಾಪೋಕ್ಲು: ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು. ನಾಪೋಕ್ಲು ಲಯನ್ಸ್ ಕ್ಲಬ್ ಮಹಿಳಾ ಸಮಾಜ ಮತ್ತು ಗಾಯತ್ರಿ ಮಹಿಳಾ ಸಂಘದ ಸಹಯೋಗದೊಂದಿಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಕುಂಡ್ಯೋಳಂಡ ಗಣೇಶ್ ಮುತ್ತಪ್ಪ ತಿಮ್ಮಯ್ಯ ಮಾದೆಯಂಡ ಡಿ ಕುಟ್ಟಪ್ಪ ಗಾಯತ್ರಿ ಮಹಿಳಾ ಸಂಘದ ಅಧ್ಯಕ್ಷೆ ಮೂವೆರ ಧರಣಿ ಗಣಪತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಬೇಬ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.