ADVERTISEMENT

ಸೋಮವಾರಪೇಟೆ: ನಾಲ್ಕು ದಿನ ಕತ್ತಲಲ್ಲಿ ಕಳೆದ ಕಿರಗಂದೂರು ಗ್ರಾಮ

ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು,

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:32 IST
Last Updated 9 ಜುಲೈ 2024, 15:32 IST
ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮಸ್ಥರು ಶ್ರಮದಾನದ ಮೂಲಕ ವಿದ್ಯುತ್ ಮಾರ್ಗವನ್ನು ಸರಿಪಡಿಸುತ್ತಿರುವುದು. ಚಿದಾನಂದ, ರೋಷನ್, ಶಿವಕುಮಾರ್, ನಾಗರಾಜ್ ಇದ್ದರು.
ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮಸ್ಥರು ಶ್ರಮದಾನದ ಮೂಲಕ ವಿದ್ಯುತ್ ಮಾರ್ಗವನ್ನು ಸರಿಪಡಿಸುತ್ತಿರುವುದು. ಚಿದಾನಂದ, ರೋಷನ್, ಶಿವಕುಮಾರ್, ನಾಗರಾಜ್ ಇದ್ದರು.   

ಸೋಮವಾರಪೇಟೆ:  ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಯ ಪರಿಣಾಮ ಕಿರಗಂದೂರು ಗ್ರಾಮದ ರಸ್ತೆಯಲ್ಲಿ 11ಕೆ.ವಿ. ವಿದ್ಯುತ್ ತಂತಿ ಮಾರ್ಗ ಮೇಲೆ ಬೃಹತ್ ಮರ ಮುರಿದು ಬಿದ್ದು, ಬ 20 ವಿದ್ಯುತ್ ಕಂಬಗು ತುಂಡಾಗಿ  4 ದಿನಗಳಿಂದ ಗ್ರಾಮಸ್ಥರು ಕತ್ತಲ್ಲೇ ಉಳಿಯುವಂತಾಗಿದೆ.

ವಿದ್ಯುತ್ ಮಾರ್ಗ ನಿರ್ಮಾಣದ ಸಂದರ್ಭ ಮರಗಳನ್ನು ತೆರವುಗೊಳಿಸದೆ ಕಾಟಾಚಾರಕ್ಕೆ ಕಂಬಗಳನ್ನು ನೆಟ್ಟಿರುವ ಪರಿಣಾಮ ಮಳೆಗಾಲದಲ್ಲಿ ಸಮಸ್ಯೆಯಾಗಿದೆ.ಇಲ್ಲಿಯವರೆಗೆ ಜಂಗಲ್ ಕಟ್ಟಿಂಗ್  ಮಾಡಿಲ್ಲ.  ಸರಿಪಡಿಸಲು ಇಲಾಖೆಯಾಗಲಿ, ಸಂಬಂಧಿಸಿ ಗುತ್ತಿಗೆದಾರರಾಗಲಿ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

‌ಕಿರಗಂದೂರು ಗ್ರಾಮಸ್ಥರು ಮಂಗಳವಾರ ಶ್ರಮದಾನಮಾಡಿ  ಮರಗಳನ್ನು ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ರೋಷನ್ ನೇತೃತ್ವದಲ್ಲಿ ಶ್ರಮದಾನ ನಡೆಯಿತು.

ADVERTISEMENT
ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮದ ನಾಗರಾಜ್ ಅವರ ಮನೆ ಸಮೀಪದ ರಸ್ತೆಯಲ್ಲಿ ಮರ ಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.