ಪ್ರಜಾವಾಣಿ ವಾರ್ತೆ
ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆರಂಭವಾಗಿರುವ ಅರಮಣಮಾಡ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಚಿಂಡಮಾಡ ತಂಡ ಮೈದಾನದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿತು. ಇದರ ಪರಿಣಾಮ 110 ರನ್‌ಗಳ ಭರ್ಜರಿ ಜಯ ಗಳಿಸಿತು.
ಚಿಂಡಮಾಡ ಮತ್ತು ಕುಲ್ಲಚಂಡ ನಡುವಿನ ಈ ಪಂದ್ಯವು ಪ್ರೇಕ್ಷಕರಿಗೆ ರಸದೌತಣ ನೀಡಿತು. ನಿಗದಿತ 8 ಓವರ್‌ಗಳಲ್ಲಿ ಚಿಂಡಮಾಡ ಗಳಿಸಿದ್ದು 3 ವಿಕಟ್ ನಷ್ಟಕ್ಕೆ ಬರೋಬರಿ 141 ರನ್. ಇದಕ್ಕೆ ಉತ್ತರವಾಗಿ ಕುಲ್ಲಚಂಡ 39 ರನ್‌ಗಳನ್ನಷ್ಟೇ ಗಳಿಸಿತು.
ಆಪಟ್ಟೀರ ತಂಡವು ಮಿನ್ನಂಡ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. 8 ಓವರ್‌ಗಳಲ್ಲಿ ಮಿನ್ನಂಡ ತಂಡವು 4 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. 6.1 ಓವರ್‌ಗಳಲ್ಲಿಯೇ ಆಪಟ್ಟೀರ ತಂಡ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ನಾಟೊಳಂಡ ತಂಡವು ಕಾಳಚಂಡ ತಂಡವನ್ನು 15 ರನ್‌ಗಳಿಂದ ಮಣಿಸಿತು. 8 ಓವರ್‌ಗಳಲ್ಲಿ ನಾಟೊಳಂಡ 5 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದರೆ, ಕಾಳಚಂಡ ತಂಡವು 4 ವಿಕೆಟ್ ನಷ್ಟಕ್ಕೆ 63 ರನ್‌ನ್ನಷ್ಟೇ ಗಳಿಸಿತು.
ಚಂಗುಲಂಡ ತಂಡವು ಮಂಡಿರ ತಂಡದ ವಿರುದ್ಧ 16 ರನ್‌ಗಳ ಜಯ ಗಳಿಸಿತು. 8 ಓವರ್‌ನಲ್ಲಿ 5 ವಿಕೆಟ್‌ನಷ್ಟಕ್ಕೆ ಚಂಗುಲಂಡ 147 ರನ್ ಗಳಿಸಿದರೆ, ಮಂಡಿರ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು.
ಮಾಚೆಟ್ಟಿರ ತಂಡವು 9 ವಿಕೆಟ್‌ಗಳ ಭರ್ಜರಿ ಜಯವನ್ನು ಕಂಜಿತಂಡ ವಿರುದ್ಧ ಸಾಧಿಸಿತು. ಕಂಜಿತಂಡ ನೀಡಿದ 42 ರನ್‌ಗಳ ಗುರಿಯನ್ನು ಕೇವಲ 4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಮಾಚೆಟ್ಟಿರ ತಲುಪಿದ್ದು ವಿಶೇಷ ಎನಿಸಿತು.
ಬೊಟ್ಟಂಗಡ ಮತ್ತು ಬೊಳಕರಂಡ ನಡುವಿನ ಪಂದ್ಯದಲ್ಲಿ ಬೊಳಕರಂಡ 13 ರನ್‌ಗಳ ಜಯ ಗಳಿಸಿತು. ಬೊಳಕರಂಡ 4 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದರೆ, ಬೊಟ್ಟಂಗಡ 52 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಸರ್ಕಂಡ ತಂಡ ನೀಡಿದ 41 ರನ್‌ಗಳ ಗುರಿಯನ್ನು ಕಾಳಿಮಾಡ ತಂಡವು ಕೇವಲ 1 ವಿಕೆಟ್ ಕಳೆದುಕೊಂಡು 4.2 ಓವರ್‌ಗಳಲ್ಲಿಯೇ ಮುಟ್ಟಿತು. ಈ ಮೂಲಕ 9 ವಿಕೆಟ್‌ಗಳ ಭರ್ಜರಿ ಜಯವನ್ನು ಕಾಳಿಮಾಡ ತಂಡ ಗಳಿಸಿತು. ಕೋದೆಂಗಡ ತಂಡವು ಬಯವಂಡ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು.
ಚಿರಿಯಪಂಡ, ಪಾಂಡ್ಯಯಂಡ ತಂಡಗಳು ವಾಕ್ ಓವರ್ ಪಡೆದವು.
ಮಹಿಳಾ ವಿಭಾಗ: ಕೊಟ್ಟಂಗಡ ನೀಡಿದ 15 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ನಾಟೊಳಂಡ ಕೇವಲ 2.4 ಓವರ್‌ಗಳಲ್ಲಿಯೇ ಮುಟ್ಟಿ, 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಕೇಲೆಟ್ಟೀರ ತಂಡವು ಚೆಕ್ಕೇರ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಚಕ್ಕೇರ ತಂಡ ನೀಡಿದ 31 ರನ್‌ಗಳ ಗುರಿಯನ್ನು ಕೇವಲ 3 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಕೇಲೆಟ್ಟೀರ ತಂಡ ಮುಟ್ಟಿತು.
ಚೆಂದಿರ ಮತ್ತು ಆದೆಂಗಡ ನಡುವಿನ ಚೆಂದಿರ ತಂಡವು 10 ವಿಕೆಟ್‌ಗಳ ಜಯ ಗಳಿಸಿತು. ಆದೆಂಗಡ ತಂಡ ನೀಡಿದ 28 ರನ್‌ಗಳ ಗುರಿಯನ್ನು ಚೆಂದಿರ ತಂಡವು ಯಾವುದೇ ವಿಕೆಟ್ ಕಳೆದು ಕೊಳ್ಳದೇ ಗುರಿ ತಲುಪಿತು. ಮಾಪಣಮಾಡ ತಂಡವು ವಾಕ್‌ಓವರ್ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.