ADVERTISEMENT

ಕುಶಾಲನಗರ: ಹಾರಂಗಿ ಜಲಾಶಯದ ಸಮೀಪ ಕಂಪಿಸಿತೆ ಭೂಮಿ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 4:43 IST
Last Updated 23 ಆಗಸ್ಟ್ 2024, 4:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕುಶಾಲನಗರದ ಬಸವನತ್ತೂರು, ಹೆಬ್ಬಾಲೆ, ಹಕ್ಕೆ, ಹುಲುಸೆ ವ್ಯಾಪ್ತಿಯಲ್ಲಿ ಭೂಮಿ‌‌ ಕಂಪಿಸಿದ‌ ಅನುಭವ ಉಂಟಾಗಿದೆ ಎಂಬ ಸುದ್ದಿ ವಾಟ್ಸ್ ಆ್ಯಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಲ್ಲಿಂದ 15 ಕಿ.ಮೀ ದೂರದಲ್ಲಿ ಹಾರಂಗಿ ಜಲಾಶಯ ಇದೆ.

ಶುಕ್ರವಾರ ಬೆಳಿಗ್ಗೆ 6.35ರ ಸುಮಾರಿನಲ್ಲಿ ಭಾರಿ ಸ್ವರೂಪದ ಶಬ್ದ ಕೇಳಿ ಬಂತು. ಈ ವೇಳೆ 2 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ.

ಈ ಕುರಿತು ಪ್ರಜಾವಾಣಿ ಸ್ಥಳೀಯರನ್ನು ವಿಚಾರಿಸಿದಾಗ ಶಬ್ದ ಕೇಳಿ ಬಂದಿದ್ದು ಹೌದು ಆದರೆ ಭೂಮಿ ಕಂಪಿಸಿದ ಅನುಭವವಾಗಿಲ್ಲ ಎಂದರು.

ADVERTISEMENT

ತಹಶೀಲ್ದಾರ್ ಕಿರಣ್ ಗೌರಯ್ಯ ಅವರನ್ನು ಸಂಪರ್ಕಿಸಿದಾಗ ಅವರು ಭೂಕಂಪಿಸಿದ ಕುರಿತು ಯಾರೊಬ್ಬರೂ ಮಾಹಿತಿ ನೀಡಿಲ್ಲ ಎಂದರು.

'ಈ ಕುರಿತು ಯಾರೊಬ್ಬರೂ ಮಾಹಿತಿ ನೀಡಿಲ್ಲ' ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳೂ ಪ್ರಜಾವಾಣಿಗೆ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.