ADVERTISEMENT

ತಲಕಾವೇರಿ ತೀರ್ಥೋದ್ಭವ : ಭಕ್ತರಿಗೆ ಉಚಿತ ಬಸ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 8:27 IST
Last Updated 16 ಅಕ್ಟೋಬರ್ 2023, 8:27 IST
<div class="paragraphs"><p>ತಲಕಾವೇರಿ:</p></div>

ತಲಕಾವೇರಿ:

   

ಗೋಣಿಕೊಪ್ಪಲು: ‘ತಲಕಾವೇರಿ ತೀರ್ಥೋದ್ಭವಕ್ಕೆ ತೆರಳುವವರಿಗೆ ಪೊನ್ನಂಪೇಟೆಯಿಂದ ಭಾಗಮಂಡಲದವರೆಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ತಿಳಿಸಿದರು.

‘ಯುವ ಜನಾಂಗದ ಕೊಡಗಿನ ಕುಲದೇವತೆ ಕಾವೇರಿ ಮಾತೆ ಬಗ್ಗೆ ಭಕ್ತಿಭಾವ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಕೊಡವ ಜನಾಂಗದ ಯುವಕ ಯುವತಿಯರ ಜೊತೆಗೆ ಅವರ ಪೋಷಕರನ್ನು ಕರೆದೊಯ್ಯಲಾಗುವುದು. ಇದರ ಜತೆಗೆ ಊಟ, ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ  ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಯುವ ಜನಾಂಗ ಹಾಗೂ ಹಿರಿಯರು ಆಗಮಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ADVERTISEMENT

‘ಹುಟ್ಟಿನಿಂದ ಸಾವಿನವರೆಗೂ ಕೊಡವ ಜನಾಂಗದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾವೇರಿ ಮಾತೆ ತೀರ್ಥೋದ್ಭವದಂದು ಭಕ್ತಿ ಪೂರ್ವಕವಾಗಿ ಬರಮಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಜಿಲ್ಲೆ ವಿವಿಧೆಡೆಯಿಂದ ವಿವಿಧ ಕೊಡವ ಸಮಾಜ ಸೇರಿ ಕೊಡವ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದುಡಿಕೊಟ್ಟ್ ಹಾಡಿನೊಂದಿಗೆ ತಳಿಯತಕ್ಕಿ ಬೊಳಕಾಯಿ ಹಿಡಿದು ಭಾಗಮಂಡಲದಿಂದ ತಲಕಾವೇರಿಗೆ ಹೆಜ್ಜೆ ಹಾಕಲಾಗುವುದು. ಇಲ್ಲಿ ರಾಜಕೀಯ ರಹಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಪೊನ್ನಂಪೇಟೆ ಬಸ್ ನಿಲ್ದಾಣದಿಂದ 17ಕ್ಕೆ ಮಧ್ಯಾಹ್ನ 1.30ರಿಂದ 2 ಗಂಟೆ ಸಮಯದಲ್ಲಿ ಬಸ್ಸು ಹೊರಡಲಿದೆ. ಪೊನ್ನಂಪೇಟೆ, ಗೋಣಿಕೊಪ್ಪಲು, ವಿರಾಜಪೇಟೆ, ಕದನೂರ್ ಮಾರ್ಗವಾಗಿ ತೆರಳಿ ಭಾಗಮಂಡಲ ತಲುಪಲಿದೆ’ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9880967573, 9972332821ರಲ್ಲಿ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.