ADVERTISEMENT

ತಲಕಾವೇರಿ: ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 19:13 IST
Last Updated 14 ಅಕ್ಟೋಬರ್ 2024, 19:13 IST
<div class="paragraphs"><p>ಒಂದಲ್ಲ, ಎರಡಲ್ಲ...ಪ್ರತಿಯೊಂದು ಸಾಮಗ್ರಿಗೂ ಒಂದೊಂದು ಪ್ಲಾಸ್ಟಿಕ್ ಬ್ಯಾಗ್ ಈಗಿನ ‘ಪ್ಯಾಷನ್’</p></div>

ಒಂದಲ್ಲ, ಎರಡಲ್ಲ...ಪ್ರತಿಯೊಂದು ಸಾಮಗ್ರಿಗೂ ಒಂದೊಂದು ಪ್ಲಾಸ್ಟಿಕ್ ಬ್ಯಾಗ್ ಈಗಿನ ‘ಪ್ಯಾಷನ್’

   

ಮಡಿಕೇರಿ: ತಾಲ್ಲೂಕಿನ ತಲಕಾವೇರಿಯಲ್ಲಿ ಅ.17ರಂದು ಬೆಳಿಗ್ಗೆ 7.40ಕ್ಕೆ ನಡೆಯಲಿರುವ ‘ಶ್ರೀಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವ’ದಲ್ಲಿ ಕಲ್ಯಾಣಿ ಮತ್ತು ಪವಿತ್ರ ಬ್ರಹ್ಮಕುಂಡಿಕೆ ಬಳಿ ಪ್ಲಾಸ್ಟಿಕ್ ಬಾಟಲಿ, ಬಿಂದಿಗೆ ಮತ್ತು ಕ್ಯಾನ್‌ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಸಾಮಾನ್ಯವಾಗಿ, ‘ತೀ‌ರ್ಥೋದ್ಭವವಾಯಿತು’ ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಕಲ್ಯಾಣಿಗೆ ಪ‍್ಲಾಸ್ಟಿಕ್ ಬಿಂದಿಗೆ, ಕ್ಯಾನ್‌ ಹಾಗೂ ಬಾಟಲಿಗಳನ್ನಿಡಿದು ಧುಮುಕುವ ಭಕ್ತರು ಬ್ರಹ್ಮಕುಂಡಿಕೆಯ ಬಳಿ ತೀರ್ಥವನ್ನು ಅದರಲ್ಲೆ ತುಂಬಿಸಿಕೊಳ್ಳುತ್ತಾರೆ. ಹಾಗಾಗಿ, ತೀರ್ಥವನ್ನು ತುಂಬಿಸಿಕೊಳ್ಳಲು ಪ್ಲಾಸ್ಟಿಕ್ ಪರಿಕರಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಭಗಂಡೇಶ್ವರ–ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.