ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹುತ್ತರಿ ಸಂಭ್ರಮ ಸೋಮವಾರ ಮನೆಮಾಡಿದೆ.
ಇಲ್ಲಿನ ಓಂಕಾರೇಶ್ವರ ದೇಗುಲದಲ್ಲಿ ರಾತ್ರಿ ವಿಜೃಂಭಣೆಯ ತೆಪ್ಪೋತ್ಸವ ನೆರವೇರಿತು. ರಾತ್ರಿ 8.45ಕ್ಕೆ ಇಲ್ಲಿ ಕದಿರು (ಭತ್ತದ ತೆನೆ) ತೆಗೆಯಲಾಗುತ್ತದೆ. ನಂತರ, ಜಿಲ್ಲೆಯ ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ.
ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲೂ ಹುತ್ತರಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ. ಎಲ್ಲೆಡೆ ಪಟಾಕಿ ಹೊಡೆದು ಹಬ್ಬವನ್ನು ಜನರು ಸಂಭ್ರಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.