ADVERTISEMENT

ಪುಸ್ತಕಗಳನ್ನು ಖರೀದಿಸಿ ಓದುವವರ ಸಂಖ್ಯೆ ಕ್ಷೀಣ: ಡಾ‌.ಕೆ.ಬಿ.ಸೂರ್ಯಕುಮಾರ್ ಬೇಸರ

ವೈದ್ಯ ಸಾಹಿತಿ ಡಾ‌.ಕೆ.ಬಿ.ಸೂರ್ಯಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 4:25 IST
Last Updated 7 ನವೆಂಬರ್ 2024, 4:25 IST
ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವದಲ್ಲಿ ವೈದ್ಯ ಸಾಹಿತಿ ಡಾ‌.ಕೆ.ಬಿ. ಸೂರ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು
ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವದಲ್ಲಿ ವೈದ್ಯ ಸಾಹಿತಿ ಡಾ‌.ಕೆ.ಬಿ. ಸೂರ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು   

ಮಡಿಕೇರಿ: ‘ಕನ್ನಡದಲ್ಲಿ ಬಹಳಷ್ಟು ಪುಸ್ತಕಗಳು ಬಿಡುಗಡೆಯಾಗುತ್ತವೆ. ಆದರೆ, ಬಿಡುಗಡೆಯಾದ ಪುಸ್ತಕಗಳನ್ನು ಖರೀದಿಸಿ ಓದುವವರ ಸಂಖ್ಯೆ ಕ್ಷೀಣ’ ಎಂದು ವೈದ್ಯ ಸಾಹಿತಿ ಡಾ‌.ಕೆ.ಬಿ. ಸೂರ್ಯಕುಮಾರ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಯಬೇಕು’ ಎಂದು ಹೇಳಿದರು.

ADVERTISEMENT

ಇದಕ್ಕೂ ಮುನ್ನ ಧ್ವಜಾರೋಹಣದ ನಂತರ, ದೀಪಾಂಜಲಿ ತಂಡದವರು ಪ್ರಾರ್ಥಿಸಿದರೆ, ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

ಸಂಘದ ಸದಸ್ಯೆಯರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕುಂತಿ ಬೋಪಯ್ಯ ಅವರು ಕನ್ನಡದ ಇತಿಹಾಸ, ಕನ್ನಡ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ನಂತರ ವೈದ್ಯರೂ ಮತ್ತು ಬರಹಗಾರರೂ ಆಗಿರುವ ಡಾ‌.ಕೆ.ಬಿ. ಸೂರ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು‌.

ನಂತರ ಸದಸ್ಯೆಯರಿಂದ ಸ್ವರಚಿತ ಕವನ ವಾಚನ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಗಳನ್ನು ಭಾರತಿ ರಮೇಶ್ ನಿರೂಪಿಸಿದರೆ, ಜಯಶೀಲಾ ಪ್ರಕಾಶ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯೆಯರಾದ ಶೈಲಾ ಮಂಜುನಾಥ್, ಆಯಿಷಾ ಹಮೀದ್, ಕಮಲಾ ಸುಬ್ಬಯ್ಯ, ಪ್ರೇಮಾ ರಾಘವಯ್ಯ, ವಸಂತಿ ಪೂಣಚ್ಚ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.