ಸಿದ್ದಾಪುರ: ದುಬಾರೆ ಮೀಸಲು ಅರಣ್ಯಕ್ಕೆ ಒಳಪಟ್ಟಿರುವ, ಮಾಲ್ದಾರೆ ಗ್ರಾಮದ ಅಸ್ತಾನ ಕೆರೆ ಬದಿಯಲ್ಲಿ ಗಾಯಗೊಂಡಿದ್ದ ನಾಲ್ಕು ವರ್ಷ ಪ್ರಾಯದ ಗಂಡು ಹುಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿದೆ.
ಮೃತಪಟ್ಟ ಹುಲಿ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹುಲಿಗಳ ಕಾದಾಟದಲ್ಲಿ ಗಾಯಗೊಂಡು ಮೃತಪಟ್ಟಿರಬಹುದು ಎನ್ನಲಾಗಿದೆ.
ಕಳೆದ ಹತ್ತು ದಿನಗಳಿಂದ ಅರಣ್ಯ ಇಲಾಖೆಯವರು ಹುಲಿ ಚಲನವಲನ ಗಮನಿಸಿದ್ದರು. ತೀವ್ರ ಅಸ್ವಸ್ತಗೊಂಡಿದ್ದ ವ್ಯಾಘ್ರ ಸೆರೆಗೆ ಇಲಾಖೆ ಮುಂದಾಗಿದ್ದು, ಸೋಮವಾರ ದುಬಾರೆ ಸಾಕಾನೆ ಶಿಬಿರದ ಆನೆಗಳ ಸಹಾಯದಿಂದ ಕಾರ್ಯಾಚರಣೆಗೆ ಮುಂದಾಗಿದ್ದರು.
ಸ್ಥಳಕ್ಕೆ ಡಿಸಿಎಫ್ ಪೂವಯ್ಯ, ಎ.ಸಿ.ಎಫ್ ಗೋಪಾಲ, ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಕಣ್ಣಂಡ ರಂಜನ್, ವನ್ಯಜೀವಿ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ರಮೇಶ್ ಭೇಟಿ ನೀಡಿದರು.
ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಸಂಸ್ಕಾರ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.