ADVERTISEMENT

ಮಿಸ್ಟಿಹಿಲ್ಸ್ ವತಿಯಿಂದ ಶೌಚಾಲಯ ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 7:17 IST
Last Updated 15 ಜೂನ್ 2024, 7:17 IST

ಮಡಿಕೇರಿ: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಅವಶ್ಯವಿದ್ದ ಶೌಚಾಲಯವೊಂದನ್ನು ನಿರ್ಮಿಸಿ ಕೊಡಲಾಗಿದೆ.

ಈಚೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಧರ್ಮ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ, ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ನಿವೃತ್ತ ಪ್ರಾಂಶುಪಾಲ ಡಾ.ಸಿ.ಬಿ.ರಾಮಚಂದ್ರ, ನಿರ್ದೇಶಕರದ ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕುಲಸಚಿವ ಡಾ.ಸೀನಪ್ಪ ಶೌಚಾಲಯ ಕಟ್ಟಡ ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ರಾಘವ ಮಾತನಾಡಿ, ‘ಮಿಸ್ಟಿಹಿಲ್ಸ್ ಕಾಲೇಜಿನ ಏಳಿಗೆಗೆ ಕೈ ಜೋಡಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಪ್ರಮೋದ್ ರೈ ಮಾತನಾಡಿ, ‘ಶೌಚಾಲಯವನ್ನು ರೋಟರಿ ಜಿಲ್ಲಾ ಗ್ರಾಂಟ್‍ನಿಂದ ಸುಮಾರು ₹ 1.81 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದು ಹೇಳಿದರು.

ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತ ಶಯನ ಮಾತನಾಡಿ, ‘ಸಂಸ್ಥೆಯು ಎರಡು ದಶಕಗಳಿಂದ ಕಾಲೇಜಿನೊಂದಿಗೆ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನಡೆಸುತ್ತಿದೆ’ ಎಂದು ವಿವರಿಸಿದರು.

ಸ್ಥಳದಲ್ಲಿ ರೋಟರಿ ಉಪರಾಜ್ಯಪಾಲ ಡಿ.ಎಂ.ತಿಲಕ್, ಮಾಜಿ ಎ.ಜಿ.ರವೀಂದ್ರ ರೈ, ನಾಮಾಂಕಿತ ಅಧ್ಯಕ್ಷ ಮಧುಸೂದನ್ ಹಾಗೂ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.