ADVERTISEMENT

ಯೋಧ ನಮನಂ ರಥಯಾತ್ರೆಗೆ ಚಾಲನೆ

ಹಿಂದೂ ಜಾಗರಣಾ ವೇದಿಕೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 14:36 IST
Last Updated 24 ಡಿಸೆಂಬರ್ 2021, 14:36 IST
ಮಡಿಕೇರಿಯ ಓಂಕಾರೇಶ್ವರ ದೇಗುಲದ ಬಳಿ ಶುಕ್ರವಾರ ಯೋಧ ನಮನಂ ರಥಯಾತ್ರೆಗ ಚಾಲನೆ ನೀಡಲಾಯಿತು
ಮಡಿಕೇರಿಯ ಓಂಕಾರೇಶ್ವರ ದೇಗುಲದ ಬಳಿ ಶುಕ್ರವಾರ ಯೋಧ ನಮನಂ ರಥಯಾತ್ರೆಗ ಚಾಲನೆ ನೀಡಲಾಯಿತು   

ಮಡಿಕೇರಿ: ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಇತರೆ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಯೂತ್ ವಿಂಗ್ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ‘ಯೋಧ ನಮನಂ ರಥಯಾತ್ರೆ’ಗೆ ಶುಕ್ರವಾರ ಚಾಲನೆ ದೊರೆಯಿತು.

ಜಿಲ್ಲೆಯಾದ್ಯಂತ ಜ.4ರವರೆಗೆ ನಡೆಯಲಿರುವ ಶ್ರದ್ಧಾಂಜಲಿ ರಥಾಯಾತ್ರೆಗೆ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆತಿದೆ.

ನಗರದಲ್ಲಿ ಪ್ರದಕ್ಷಿಣೆ ಬಳಿಕ ಮಡಿಕೇರಿ ತಾಲ್ಲೂಕು ಸೇರಿದಂತೆ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಬಳಿಕ ಜನವರಿ 4ರಂದು ಕುಶಾಲನಗರದಲ್ಲಿ ಅಂತ್ಯಗೂಳ್ಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.