ವಿರಾಜಪೇಟೆ: ಸಮೀಪದ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ 2025ರ ಜನವರಿ ತಿಂಗಳಲ್ಲಿ ಚಿಟ್ಟಡೆಯಲ್ಲಿ ನಡೆಯಲಿರುವ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಟೂರ್ನಿಯ ‘ಕೂವಲೆರ ಚಿಟ್ಟಡೆ ವಾಲಿಬಾಲ್ ಕಪ್ -2025’ರ ಲಾಂಛನವನ್ನು ಗುರುವಾರ ಅನಾವರಣಗೊಳಿಸಲಾಯಿತು.
ಕೆ.ಎಂ.ಎ ವತಿಯಿಂದ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ವಿನ್ಯಾಸಗೊಳಿಸಿದ ಟೂರ್ನಿಯ ಲಾಂಛನವನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅವರು ಅನಾವರಣಗೊಳಿಸಿದರು.
ಕೆ.ಎಂ.ಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಮಾತನಾಡಿ, ‘ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಚಿಟ್ಟಡೆಯಲ್ಲಿರುವ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಆಯೋಜಿಸಲಾಗಿರುವ ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಕೌಟುಂಬಿಕ ವಾಲಿಬಾಲ್ ಟೂರ್ನಿಗೆ ಪಂದ್ಯಾವಳಿಗೆ ಆಯೋಜಕರು ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಸಹಕಾರ ಕೋರಿದ್ದು, ಈ ಕುರಿತ ಎಲ್ಲಾ ಸಹಕಾರವನ್ನು ಸಂಸ್ಥೆಯಿಂದ ನೀಡಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ, ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ನಿರ್ದೇಶಕ ಚಿಮ್ಮಿಚೀರ ಕೆ. ಇಬ್ರಾಹಿಂ, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಚಿಟ್ಟಡೆ ಕೂವಲೆರ ಕುಟುಂಬಸ್ಥರ ಕೂಟದ ಅಧ್ಯಕ್ಷ ಕೆ.ಯು. ಉಮ್ಮರ್, ಉಪಾಧ್ಯಕ್ಷ ಅಬ್ದುಲ್ ಪತಾಹ್, ಕಾರ್ಯದರ್ಶಿ ಕೆ.ಯು. ಫಕ್ರುದ್ದೀನ್, ಕೋಶಾಧಿಕಾರಿ ಕೆ.ಎಂ. ಅಬ್ಬಾಸ್, ಆಯೋಜನಾ ಸಮಿತಿ ಸದಸ್ಯರಾದ ಕೆ.ಎಂ. ಸಜೀರ್, ನೌಶಾದ್, ಕೆ.ಎಸ್. ರಜಾಕ್, ಸಾದುಲಿ, ಕೆ.ಎಚ್. ಮೊಹಮ್ಮದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.