ಕುಶಾಲನಗರ (ಕೊಡಗು ಜಿಲ್ಲೆ): ದಸರಾ ಆನೆಗಳಾದ ಧನಂಜಯ ಮತ್ತು ಕಂಜನ್ ನಡುವಿನ ಜಗಳ ದುಬಾರೆಯಲ್ಲೂ ಮುಂದುವರಿದಿದೆ.
ಮೈಸೂರು ದಸರಾ ವೇಳೆ ಈ ಆನೆಗಳು ಜಗಳವಾಡಿಕೊಂಡು ಅರಮನೆಯಿಂದ ಹೊರಕ್ಕೆ ರಸ್ತೆಗೆ ಬಂದು ಆತಂಕ ಮೂಡಿಸಿದ್ದವು. ಇದೀಗ ಮತ್ತೆ ದುಬಾರೆ ಶಿಬಿರದಲ್ಲೂ ಕಾಳಗಕ್ಕಿಳಿದಿವೆ.
ಭಾನುವಾರ ಸಂಜೆ ಧನಂಜಯ ತನ್ನ ದಂತದಿಂದ ಕಂಜನ್‌ಗೆ ತಿವಿದಿತ್ತು. ನಂತರ, ಮಾವುತ ಅದನ್ನು ನಿಯಂತ್ರಿಸಿದ್ದರು. ಈ ದೃಶ್ಯವನ್ನು ಸೆರೆ ಹಿಡಿದಿರುವ ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಘಟನೆಯು ಕೆಲವೇ ನಿಮಿಷಗಳಲ್ಲಿ ನಡೆದಿದ್ದು, ನಂತರ ಆನೆಗಳು ಸುಮ್ಮನಾಗಿವೆ. ಆದರೂ ಈ ಎರಡೂ ಆನೆಗಳ ಬಳಿ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
‘ಎರಡೂ ಆನೆಗಳು ಈಗ ಶಾಂತವಾಗಿದ್ದು, ಮಾವುತರು ನಿಗಾ ವಹಿಸಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ರತನ್‌ಕುಮಾರ್ ತಿಳಿಸಿದರು.
‘ದುಬಾರೆಯಲ್ಲಿ ಹೆಚ್ಚಾಗಿ ಗಂಡಾನೆಗಳೇ ಇದ್ದು, ಸಮರ್ಥವಾದ ಹೆಣ್ಣಾನೆಗಳಿಲ್ಲ. ಅದೇ ಕಾರಣಕ್ಕೆ, ಗಂಡಾನೆಗಳ ಮಧ್ಯೆ ಆಗಾಗ್ಗೆ ಜಗಳ ನಡೆಯುವುದು ಸಾಮಾನ್ಯ ಸಂಗತಿ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.