ADVERTISEMENT

ಅಂದಗೋವೆ ಪೈಸಾರಿ ರಸ್ತೆಯಲ್ಲಿ ಕಾಡಾನೆ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:23 IST
Last Updated 7 ಜುಲೈ 2024, 16:23 IST

ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಅಂದಗೋವೆ ಪೈಸಾರಿ ನಡುರಸ್ತೆಯಲ್ಲಿ ಭಾನುವಾರ ಕಾಡಾನೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಬೆಳಿಗ್ಗೆ ಕಂಡುಬಂತು.

ತಮ್ಮ ಮನೆಯ ಮುಂಭಾಗದಿಂದಲೇ ಆನೆ ಸಂಚರಿಸುವುದು ಕಂಡು ಜನ ತಮ್ಮ ಮೊಬೈಲ್ ಮೂಲಕ ಕ್ಲಿಕ್ಕಿಸಿ ಸಂತೋಷ ಪಡುವುದರ ಜೊತೆಗೆ ಎಲ್ಲಿ ದಾಳಿ ನಡೆಸುತ್ತದೆಯೋ ಎನ್ನುವ ಆತಂಕಪಟ್ಟರು.

ಉದ್ದದ ಕೋರೆ ಹೊಂದಿದ ಕಾಡಾನೆಯು ರಾಷ್ಟ್ರೀಯ ಹೆದ್ದಾರಿಯತ್ತ ಬಂದು‌ ಮೆಟ್ನಳ್ಳ ಮಾರ್ಗವಾಗಿ ಆನೆಕಾಡು‌ ಅರಣ್ಯದೊಳಗೆ ಪ್ರವೇಶಿಸಿತು.

ADVERTISEMENT

ಪ್ರತಿನಿತ್ಯ ಕಾಡಾನೆಗಳು ಬೆಳ್ಳಂಬೆಳಗ್ಗೆಯೇ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ವಾಯುವಿಹಾರಕ್ಕೆ ತೆರಳಲು ಹಾಗೂ ಶಾಲೆ- ಕಾಲೇಜಿಗೆ ಮಕ್ಕಳು ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.