ADVERTISEMENT

ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮುಖ್ಯ: ಶಾಸಕ ಡಾ. ಮಂತರ್ ಗೌಡ

ಮಹಿಳಾ ಸಹಕಾರ ಸಂಘದ ವಜ್ರಮಹೋತ್ಸವದಲ್ಲಿ ಶಾಸಕ ಮಂತರ್‌ಗೌಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:07 IST
Last Updated 28 ಅಕ್ಟೋಬರ್ 2024, 4:07 IST
ಸೋಮವಾರಪೇಟೆ ಮಹಿಳಾ ಸಹಕಾರ ಸಂಘದ ವಜ್ರ ಮಹೋತ್ಸವ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು
ಸೋಮವಾರಪೇಟೆ ಮಹಿಳಾ ಸಹಕಾರ ಸಂಘದ ವಜ್ರ ಮಹೋತ್ಸವ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು   

ಸೋಮವಾರಪೇಟೆ: ‘ಮಹಿಳೆಯರಲ್ಲಿ ಸ್ವಯಂ ಕಾಳಜಿಯ ಶಕ್ತಿ ಇರುವುದರಿಂದ ಅವರು ಯಾವುದೇ ಕೆಲಸವನ್ನಾದರೂ, ಯಶಸ್ವಿಯಾಗಿ ಮುನ್ನಡಸಬಲ್ಲರು’ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಸಹಕಾರ ಸಂಘದ ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಮಹಿಳೆಯರಿಂದ ಮಾತ್ರ ಸಾಧ್ಯ. ತಮ್ಮ ಮನೆಯಿಂದಲೇ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮಾಡುವುದರೊಂದಿಗೆ, ಪುರುಷನ ಯಶಸ್ಸಿನ ಹಿಂದೆ ಯಾವಾಗಲೂ ನಿಲ್ಲುತ್ತಾರೆ. ಶಿಕ್ಷಣ ಸೇರಿದಂತೆ ಸಮಾಜದಲ್ಲಿ ಸಮಾನತೆಗೆ ಹೆಚ್ಚಾಗಬೇಕಿದಲ್ಲಿ ಇನ್ನೂ ಹೆಚ್ಚು ಮಹಿಳಾ ಸಂಘಗಳು ಾರಂಭವಾಗಬೇಕು. ಮಹಿಳಾ ಸಂಘಗಳ ಬೆಳವಣಿಗೆಗೆ ಇಲಾಖಾಧಿಕಾರಿಗಳು ಸಹಕರಿಸಬೇಕು’ ಎಂದರು.

ADVERTISEMENT

‘20 ವರ್ಷಗಳ ಹಿಂದೆ ರಾಜಕೀಯದಲ್ಲಿ ಮಹಿಳೆಗೆ ಮೀಸಲಾತಿ ತಂದ ಹಿನ್ನೆಲೆಯಲ್ಲಿ ಇಂದು ಹಲವು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ, ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ನುಸುಳದಂತೆ ನೋಡಿಕೊಳ್ಳುವ ಮೂಲಕ ಸಂಘದ ಬೆಳವಣಿಗೆಗೆ ಮುಂದಾಗಬೇಕು. ಸಂಘ ಅಭಿವೃದ್ಧಿಗೆ ನಮ್ಮ ಸಹಕಾರ ನೀಡುವುದರೊಂದಿಗೆ ರಾಜ್ಯ ಸಹಕಾರ ಸಚಿವರಲ್ಲಿ ಸಂಘದ ಸದಸ್ಯರನ್ನು ಕರೆದೊಯ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಕ್ಕೆ ಮನವಿ ಮಾಡುವೆ’ ಎಂದರು.

ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶೈಲಜಾ ಮಾತನಾಡಿ, ‘ಮಹಿಳಾ ಸಹಕಾರ ಸಂಘ 75 ವರ್ಷಗಳ ಕಾರ್ಯಕ್ರಮ ಆಚರಿಸುತ್ತಿರುವುದು ಶ್ಲಾಘನೀಯ. ಯಾವುದೇ ಸಹಕಾರ ಸಂಘಗಳು ಕಾನೂನು ರೀತಿಯಲ್ಲಿ ಮುನ್ನಡೆದಲ್ಲಿ ಅದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಗಾಲು ಹಾಕುವುದಿಲ್ಲ. ಕೊಡಗಿನಲ್ಲಿ ಹೆಚ್ಚಿನ ಎಲ್ಲ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ತಮ್ಮ ಸಂಘಗಳಲ್ಲಿ ಯಾವುದೇ ರೀತಿಯ ತೊಡಕಾದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಸರಿಪಡಿಸಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಾರದಾ ಶಂಕರಪ್ಪ, ಅರುಂಧತಿ ದೇವರಾಜು, ಲೀಲಾ ನಿರ್ವಾಣಿ, ಜಲಜಾ ಶೇಖರ್, ಸುಮಾ ಸುದೀಪ್, ಗಾಯತ್ರಿ ನಾಗರಾಜು ಹಾಗೂ ಸಂಘದ ವ್ಯವಸ್ಥಾಪಕ ಗುರುಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರಾದ ಶೋಭಾ ಯಶ್ವಂತ್, ಗೀತಾ ರಾಜು, ಜ್ಯೋತಿ ಶುಭಾಕರ್, ವರಲಕ್ಷ್ಮೀ ಸಿದ್ಧೇಶ್ವರ್, ಚಂದ್ರಕಲಾ ಗಿರೀಶ್, ಅಮಿತ ಪ್ರದೀಪ್, ದಾಕ್ಷಾಯಣಮ್ಮ ಶಿವಾನಂದ, ಶೈಲಾ ವಸಂತ್ ಇದ್ದರು.

ಸೋಮವಾರಪೇಟೆ ಮಹಿಳಾ ಸಹಕಾರ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಾರದಾ ಶಂಕರಪ್ಪ ಅರುಂಧತಿ ದೇವರಾಜು ಲೀಲಾ ನಿರ್ವಾಣಿ ಜಲಜಾ ಶೇಖರ್ ಸುಮಾ ಸುದೀಪ್ ಗಾಯತ್ರಿ ನಾಗರಾಜು ಅವರನ್ನು ಸನ್ಮಾನಿಸಲಾಯಿತು

ಸೋಮವಾರಪೇಟೆ: ಮಹಿಳೆಯರಲ್ಲಿ ಸ್ವಯಂ ಖಾಳಜಿಯ ಶಕ್ತಿ ಇರುವುದರಿಂದ ಅವರು ಯಾವುದೇ ಕೆಲಸವನ್ನಾದರೂ ಯಶಸ್ವಿಯಾಗಿ ಮುನ್ನೆಡಸಬಲ್ಲರು ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು. ಇಲ್ಲಿನ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಸಹಕಾರ ಸಂಘದ 75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಮಹಿಳೆಯರಿಂದ ಮಾತ್ರ ಸಾಧ್ಯ. ತಮ್ಮ ಮನೆಯಿಂದಲೇ ಉತ್ತಮ ಪ್ರಜೆಯಗಳನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮಾಡುವುದರೊಂದಿಗೆ ಪುರುಷನ ಯಶಸ್ಸಿನ ಹಿಂದೆ ಯಾವಾಗಲು ನಿಲ್ಲುತ್ತಾರೆ. ಶಿಕ್ಷಣ ಸೇರಿದಂತೆ ಸಮಾಜದಲ್ಲಿ ಸಮಾನತೆಗೆ ಹೆಚ್ಚಾಗಬೇಕಿದಲ್ಲಿ ಇನ್ನೂ ಮಹಿಳಾ ಸಂಘಗಳು ಪ್ರಾರಂಭವಾಗಬೇಕು. ಮಹಿಳಾ ಸಂಘಗಳಿಗಳ ಬೆಳವಣಿಗೆಗೆ ಇಲಾಖಾಧಿಕಾರಿಗಳು ಸಹಕರಿಸಬೇಕೆಂದರು. 20 ವರ್ಷಗಳ ಹಿಂದೆ ರಾಜಕೀಯದಲ್ಲಿ ಮಹಿಳೆಗೆ ಮೀಸಲಾತಿ ತಂದ ಹಿನ್ನೆಲೆಯಲ್ಲಿ ಇಂದು ಹಲವು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ನುಸುಳದಂತೆ ನೋಡಿಕೊಳ್ಳುವ ಮೂಲಕ ಸಂಘದ ಬೆಳವಣಿಗೆಗೆ ಮುಂದಾಗಬೇಕು. ಸಂಘ ಅಭಿವೃದ್ಧಿಗೆ ನಮ್ಮ ಸಹಕಾರ ನೀಡುವುದರೊಂದಿಗೆ ರಾಜ್ಯ ಸಹಕಾರ ಸಚಿವರಲ್ಲಿ ಸಂಘದ ಸದಸ್ಯರನ್ನು ಕೋಂಡೋಯ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಕ್ಕೆ ಮನವಿ ಮಾಡುವ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶೈಲಜಾ ಮಾತನಾಡಿ ಮಹಿಳಾ ಸಹಕಾರ ಸಂಘ 75 ವರ್ಷಗಳ ಕಾರ್ಯಕ್ರಮ ಆಚರಿಸುತ್ತಿರುವುದು ಶ್ಲಾಘನೀಯ. ಯಾವುದೇ ಸಹಕಾರ ಸಂಘಗಳು ಕಾನೂನು ರೀತಿಯಲ್ಲಿ ಮುನ್ನೆಡೆದಲ್ಲಿ ಅದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಗಾಲು ಹಾಕುವುದಿಲ್ಲ. ಕೊಡಗಿನಲ್ಲಿ ಹೆಚ್ಚಿನ ಎಲ್ಲ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ತಮ್ಮ ಸಂಘಗಳಲ್ಲಿ ಯಾವುದೇ ರೀತಿಯ ತೊಡಕಾದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಸರಿಪಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶಾರದ ಶಂಕರಪ್ಪ ಅರುಂಧತಿ ದೇವರಾಜು ಲೀಲಾ ನಿರ್ವಾಣಿ ಜಲಜಾ ಶೇಖರ್ ಸುಮಾ ಸುದೀಪ್ ಗಾಯತ್ರಿ ನಾಗರಾಜು ಹಾಗೂ ಸಂಘದ ವ್ಯವಸ್ಥಾಪಕ ಗುರುಸಿದ್ದಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಶೋಭಾ ಯಶ್ವಂತ್ ಗೀತಾ ರಾಜು ಜ್ಯೋತಿ ಶುಭಾಕರ್ ವರಲಕ್ಷ್ಮೀ ಸಿದ್ಧೇಶ್ವರ್ ಚಂದ್ರಕಲಾ ಗಿರೀಶ್ ಅಮಿತ ಪ್ರದೀಪ್ ದಾಕ್ಷಾಯಣಮ್ಮ ಶಿವಾನಂದ ಶೈಲಾ ವಸಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.