ಮುಳಬಾಗಿಲು: ತೋಟದಲ್ಲಿ ಮೇಯಲು ಬರುತ್ತವೆ ಎಂಬ ಸಣ್ಣ ವಿಚಾರಕ್ಕೆ ವಿಷ( ಪೋರೇಟ್) ಸಿಂಪಡಿಸಿ 27 ನಾಟಿ ಕೋಳಿಗಳನ್ನು ಕೊಂದಿರುವ ಘಟನೆ ತಾಲ್ಲೂಕಿನ ಗುಟ್ಲೂರಿನಲ್ಲಿ ನಡೆದಿದೆ ಶನಿವಾರ ಬೆಳಗ್ಗೆ ನಡೆದಿದೆ.
ಸುತ್ತಮುತ್ತಲಿನ ಕೋಳಿಗಳು ತೋಟಕ್ಕೆ ಬಂದು ಓಡಾಡುತ್ತವೆ ಎನ್ನುವ ಕಾರಣಕ್ಕೆ ಮೂರು ಜನರಿಗೆ ಸೇರಿದ 27 ಕೋಳಿಗಳನ್ನು ಜಮೀನು ಮಾಲೀಕ ಅಂಬರೀಶ್ ನಾರಾಯಣಪ್ಪ ಫೋರೇಟ್ ವಿಷ ಹಾಕಿ ಸಾಯಿಸಿದ್ದಾರೆ ಎಂದು ಕೋಳಿ ಮಾಲೀಕ ಶಿವರಾಜ್ ದೂರು ನೀಡಿದ್ದಾರೆ.
ಗ್ರಾಮದ ಶಿವರಾಜ್ ಎಂಬುವವರಿಗೆ ಸೇರಿದ 18 , ನಾಗರಾಜ್ ಎಂಬುವವರ 7 ಹಾಗೂ ಶಿವಪ್ಪ ಎಂಬುವವರ 3 ಕೋಳಿಗಳನ್ನು ಅಂಬರೀಶ್ ನಾರಾಯಣಪ್ಪ ಸಾಯಿಸಿದ್ದಾರೆ. ಕೋಳಿಗಳನ್ನು ಸಾಯಿಸಿರುವವರ ಕಡೆಯಿಂದ ಪರಿಹಾರ ಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೋಳಿ ಮಾಲೀಕರು ಹೇಳಿದ್ದಾರೆ.
‘ಕೋಳಿ ಹಾಗೂ ಮೊಟ್ಟೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದೆವು. ಸಣ್ಣ ಕಾರಣಕ್ಕೆ ಕೋಳಿಗಳನ್ನು ಕೊಂದಿದ್ದಾರೆ. ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಳಿಗಳನ್ನು ಕೊಂದಿರುವವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಇದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು’ ಎಂದು ಕೋಳಿ ಮಾಲೀಕ ಶಿವರಾಜ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.