ವೇಮಗಲ್: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್, ಗ್ರಾಮೀಣಾಭಿವದ್ಧಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಇತರ ಕಾಂಗ್ರೆಸ್ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿವಿಧ ಸಾವಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೋ ಹರಿಯಬಿಟ್ಟಿರುವ ಮೋಹಿತ್ ನರಸಿಂಹಮೂರ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವೇಮಗಲ್ ಹೋಬಳಿ ದಲಿತಪರ ಸಂಘಟನೆಗಳು ಗುರುವಾರ ವೇಮಗಲ್ ಇನ್‌ಸ್ಪೆಕ್ಟರ್ ಮಂಜು ಬಿ.ಪಿ ಮೂಲಕ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವೈರಲ್ ಆದ ವಿಡಿಯೋದಲ್ಲಿ ಸಾರ್ವಜನಿಕ ಶಾಂತಿ ಕದಡುವ ಮತ್ತು ಅಪರಾಧವೆಸಗಲು ಪ್ರಚೋದಿಸುವ ಅಂಶಗಳಿವೆ. ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಅವವಾನಿಸುವುದರ ಜತೆಗೆ ಎರಡು ಪಂಗಡಗಳ ಮಧ್ಯೆ ದ್ವೇಷ ಪ್ರಚೋದಿಸುವ ಉದ್ದೇಶವಿದೆ. ಆದ್ದರಿಂದ ಮೋಹಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಪರ ಸಂಘಟನೆಗಳು ಆಗ್ರಹಿಸಿವೆ.
ಚನ್ನಸಂದ್ರ ವೆಂಕಟೇಶ್, ಕಾಂಗ್ರೆಸ್ ಮುಖಂಡ ಮುನಿರಾಜು, ದೇವರಹಳ್ಳಿ ಶ್ರೀನಿವಾಸ್, ಮಲಿಯಪ್ಪನಹಳ್ಳಿ ತಿರುಮಳಪ್ಪ, ಆಲೇರಿ ಮುನಿರಾಜು, ವೇಮಗಲ್ ಸುಧಾಕರ್, ಆಂಜಿ, ನರಸಿಂಹ, ನಸೀರ್ ಅಹ್ಮದ್, ದೇವರಾಜ್, ಅಶ್ವಥ್ ಮೂರ್ತಿ, ಮುನಿರಾಜ್, ಬೆಳ್ಳೂರು ನರಸಿಂಹ, ದಲಿತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.