ADVERTISEMENT

ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 10:08 IST
Last Updated 23 ನವೆಂಬರ್ 2023, 10:08 IST
   

ಕೋಲಾರ: ‘ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಅಂದರೆ ಸುಮಾರು ₹ 4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ. 2.66 ಲಕ್ಷ ಕಾರ್ಡ್‌ದಾರರು ಪೋಸ್ಟಲ್‌ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯವಾಗುತ್ತಿದೆ. ಶೇ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ ಏಳು ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಶೇ 100 ಸಾಧನೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ‘ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಅವರು ಹೇಳಿದಂತೆ ನಾನು ಕೇಳುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಾನು ಹೇಳಿರಲಿಲ್ಲ. ಆದರೆ, ಟಿಕೆಟ್‌ ಕೊಟ್ಟರು’ ಎಂದರು.

ADVERTISEMENT

‘ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಬಾರಿ ಅಧಿಕಾರಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.