ADVERTISEMENT

ಬಂಗಾರಪೇಟೆ: ಪಿಯು ವಿದ್ಯಾರ್ಥಿನಿ ರೂಬಿಕ್ಸ್ ಕ್ಯೂಬ್ ಶಿಕ್ಷಕಿ!

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:01 IST
Last Updated 17 ಅಕ್ಟೋಬರ್ 2024, 14:01 IST
<div class="paragraphs"><p>ಯುಕ್ತ</p></div>

ಯುಕ್ತ

   

ಬಂಗಾರಪೇಟೆ: ಇಲ್ಲಿನ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿನಿ ಇದೀಗ ರೂಬಿಕ್ಸ್ ಕ್ಯೂಬ್‌ ಶಿಕ್ಷಕಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಎಂಟು ವಿಶ್ವದಾಖಲೆಗಳ ಪುಟ ಸೇರಿದ್ದಾರೆ. 

ಬಾಲಕಿ ಕೊಲ್ಲ ಕಮಲ್ ವಿಜಯ ಯುಕ್ತ ಅವರಿಗೆ ನಳಂದಾ ವಿವಿಯಿಂದ ಗೌರವ ಡೌಕ್ಟರೇಟ್‌ಗೆ ಭಾಜನರಾಗಿದ್ದಾರೆ. 

ADVERTISEMENT

ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಯುಕ್ತ ಸುಮಾರು 85 ಬಗೆಯ ರೂಬಿಕ್ಸ್ ಕ್ಯೂಬ್‌ಗಳ ಬಗ್ಗೆ ಪರಿಣಿತಿ ಪಡೆದಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಇತರ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಕ್ರ‍್ಯಾಕ್ ಎ ಕ್ಯೂಬ್ ಎನ್ನುವ ಹೆಸರಿನಲ್ಲಿ ಯುಟೂಬ್ ಚಾನಲ್ ತೆರೆದು, ತಾನು ಅಭ್ಯಾಸ ಮಾಡುವ ವಿವಿಧ ರೀತಿಯ ವಿಡಿಯೊ ಮೂಲಕ ತರಬೇತಿಯನ್ನೂ ನೀಡುತ್ತಿದ್ದಾರೆ.

ಫ್ರ್ಯೂಟ್ ಕ್ಯೂಬ್ಸ್, ಶೇಪ್ ಕ್ಯೂಬ್ಸ್, ಬ್ಯಾರಲ್ ಅಥವಾ ಸಿಲಿನ್ಡ್ರಿಕಲ್ ಕ್ಯೂಬ್ಸ್ ಸೇರಿ ಇತರೆ ಕ್ಯೂಬ್ಸ್ ಬಗ್ಗೆ ಆಸಕ್ತಿ ಹೊಂದಿರುವ ಯುಕ್ತ 100ಕ್ಕಿಂತ ಹೆಚ್ಚು ಕ್ಯೂಬ್ಸ್ ಬಗ್ಗೆ ಅಭ್ಯಾಸ ಮಾಡಿದ್ದಾರೆ. ವಿಶ್ವದಾದ್ಯಂತ 600 ಮಕ್ಕಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿದ್ದಾರೆ. ಕ್ಯೂಬ್ಸ್ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗಲಿದೆ. ಬುದ್ಧಿ ಚುರುಕಾಗಲಿದ್ದು, ಜ್ಞಾಪಕ ಶಕ್ತಿ ವೃದ್ಧಿಯಾಗಲಿದೆ. ತಾಳ್ಮೆ, ಮನಸ್ಸು, ಕಣ್ಣು ಮತ್ತು ಕೈ ಬೆರಳುಗಳ ಸಮನ್ವಯಕ್ಕೆ ನೆರವಾಗಲಿದೆ ಎಂದು ತಿಳಿಸಿದರು. 

ರೂಬಿಕ್ಸ್ ಕ್ಯೂಬ್‌ಗಳಲ್ಲಿ ಶಿವ, ಸಾಯಿಬಾಬ, ಡಾ. ಪುನೀತ್ ರಾಜ್ ಕುಮಾರ, ಡಾ. ರಾಧಾಕೃಷ್ಣ, ಡಾ. ಬಿ.ಆರ್. ಅಂಬೇಡ್ಕರ್ ಚಿತ್ರಗಳನ್ನು ಜೋಡಿಸುವ ಮೂಲಕ ಜನರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. 

ಸುಮಾರು ಎಂಟು ಬಹುಮಾನಗಳನ್ನು ಪಡೆದಿದ್ದು, ಪ್ರಸ್ತುತ ಬಾಲ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಂಗಾರಪೇಟೆ ಪಟ್ಟಣದ ವಿಶ್ವದ ಕಿರಿಯ ರೂಬಿಕ್ಸ್ ಕ್ಯೂಬ್‌ ಶಿಕ್ಷಕಿ ಯುಕ್ತ ಅವರಿಗೆ ಪುನೀತ್ ರಾಜ್ ಕುಮಾರ್ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.