ADVERTISEMENT

ಮೋತಕಪಲ್ಲಿ: ಒಂದು ವರ್ಷದ ಹೋರಿ ₹ 5 ಲಕ್ಷಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 22:59 IST
Last Updated 5 ಜುಲೈ 2024, 22:59 IST
ಬೇತಮಂಗಲ ಸಮೀಪದ ಮೋತಕಪಲ್ಲಿ ಗ್ರಾಮದ ಯುವ ರೈತ ಪರಂದಾಮ ಅವರು ಸಾಕಾಣಿಕೆ ಮಾಡಿರುವ ಎರಡು ಹೋರಿಗಳು
ಬೇತಮಂಗಲ ಸಮೀಪದ ಮೋತಕಪಲ್ಲಿ ಗ್ರಾಮದ ಯುವ ರೈತ ಪರಂದಾಮ ಅವರು ಸಾಕಾಣಿಕೆ ಮಾಡಿರುವ ಎರಡು ಹೋರಿಗಳು   

ಬೇತಮಂಗಲ: ಕೇವಲ ಒಂದು ವರ್ಷದ ಹೋರಿ ಬರೋಬ್ಬರಿ ₹ 5.05 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಮೆರೆದಿದೆ.

ಕೆಜಿಎಫ್ ತಾಲ್ಲೂಕಿನ ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿಯ ಮೋತಕಪಲ್ಲಿ ಗ್ರಾಮದ ಯುವ ರೈತ ಪರಂಧಾಮ ಅವರಿಗೆ ಸೇರಿದ ಹೋರಿ ಇದಾಗಿದೆ.ಅವರು ಸಾಕಿರುವ ಒಂದು ವರ್ಷದ ಹೋರಿಯನ್ನು ₹ 5.05 ಲಕ್ಷಕ್ಕೆ ತಮಿಳು ನಾಡಿನ ರೈತರೊಬ್ಬರಿಗೆ ಮಾರಾಟ ಮಾಡಲಾಗಿದೆ.

ಒಂದು ವರ್ಷದ ಹೋರಿ ಈಗಾಗಲೇ ಆಂಧ್ರ ಪ್ರದೇಶ ಎರಡು ಹೋರಿ ಓಡಿಸುವ ಪಂದ್ಯಗಳಲ್ಲಿ ಪಾಲ್ಗೊಂಡು ಒಂದು ಪಂದ್ಯದಲ್ಲಿ ಪ್ರಥಮ ಬಹುಮಾನವಾಗಿ ₹ 50 ಸಾವಿರ ನಗದು ಮತ್ತು ಎರಡನೇ ಪಂದ್ಯದಲ್ಲಿ ಎರಡನೇ ಬಹುಮಾನವಾಗಿ 20 ಗ್ರಾಂ ಚಿನ್ನವನ್ನು ಗಳಿಸಿದೆ.

ADVERTISEMENT

ಎರಡು ಪಂದ್ಯಗಳಲ್ಲಿ ಹೋರಿಯ ವೇಗವನ್ನು ವೀಕ್ಷಿಸಿದ್ದ ತಮಿಳುನಾಡಿನ ರೈತರೊಬ್ಬರು ಮೋತಕಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಂಧಾಮ ಅವರಿಂದ ಹೋರಿಯನ್ನು ಖರೀದಿಸಿದ್ದಾರೆ.

ಪರಂಧಾಮ ಅವರು 6 ತಿಂಗಳ ಹಿಂದೆ ಎರಡು ಹೋರಿಗಳನ್ನು ₹ 35 ಸಾವಿರಕ್ಕೆ ಖರೀದಿಸಿದ್ದರು. ಈಗ ಒಂದು ಹೋರಿಯನ್ನು ಮಾರಾಟ ಮಾಡಲಾಗಿದ್ದು, ಮತ್ತೊಂದು ಹೋರಿಯನ್ನು ಸಾಕುತ್ತಿದ್ದಾರೆ.

ನಮ್ಮ ಹಿರಿಯರ ಕಾಲದಿಂದ ಜಾನುವಾರು ಸಾಕುತ್ತಿದ್ದೇವೆ. ಈಚೆಗೆ ಹೋರಿ ಸಾಕಾಣಿಕೆ ಕಡೆ ಆಸಕ್ತಿ ಬೆಳೆದಿದೆ. ಅದರ ಭಾಗವಾಗಿ ಈಗ ಒಂದು ಹೋರಿ ಒಳ್ಳೆಯ ಬೆಲೆ ಮಾರಾಟವಾಗಿದೆ.
–ಪರಂಧಾಮ, ಯುವ ರೈತ ಮೋತಕಪಲ್ಲಿ

ಇತ್ತೀಚೆಗೆ ಆಂದ್ರ ಪ್ರದೇಶ ಪಂದ್ಯದಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.