ADVERTISEMENT

ಕೋಲಾರದಲ್ಲಿ ಅವರೆ ಮೇಳ: ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 13:58 IST
Last Updated 12 ಜನವರಿ 2020, 13:58 IST
ಕೋಲಾರದಲ್ಲಿ ವಾಸವಿ ಯುವಜನ ಸಂಘದಿಂದ ಭಾನುವಾರ ಅವರೆ ಮೇಳಕ್ಕೆ ನಡೆಯಿತು.
ಕೋಲಾರದಲ್ಲಿ ವಾಸವಿ ಯುವಜನ ಸಂಘದಿಂದ ಭಾನುವಾರ ಅವರೆ ಮೇಳಕ್ಕೆ ನಡೆಯಿತು.   

ಕೋಲಾರ: ನಗರದಲ್ಲಿ ವಾಸವಿ ಮಹಿಳಾ ಮಂಡಳಿ, ವಾಸವಿ ಮಿತ್ರ ಬಳಗದ ಸಹಯೋಗದಲ್ಲಿ ಭಾನುವಾರ ನಡೆದ ಅವರೆ ಮೇಳಕ್ಕೆ ನಗರಸಭೆ ಆಯುಕ್ತ ಶ್ರೀಕಾಂತ್ ಚಾಲನೆ ನೀಡಿದರು.

ಅವರೆಕಾಯಿ ಹೋಳಿಗೆ, ನಿಪ್ಪಟ್ಟು, ಉಸುಳಿ, ಕೋಡುಬಳೆ, ಜಾಮೂನು, ಪಾಯಸ, ದೋಸೆ, ಸಾರು, ಉಪ್ಪಿಟ್ಟು, ಹಿತಕಬೇಳೆ ಅಕ್ಕಿ, ರಾಗಿ ರೊಟ್ಟಿ, ಅವರೆಕಾಳು ಚಿತ್ರಾನ್ನ, ಗೋಡಂಬಿ ಹಿತಕಬೇಳೆ, ಅವಲಕ್ಕಿ ಮಿಕ್ಸ್ ಹೀಗೆ ಅವಕಾಳಿನಿಂದ ತಯಾರಿಸಲಾಗದ ವಿವಿಧ ಭಕ್ಷ್ಯಗಳ ಪ್ರದರ್ಶನ ಹಾಗೂ ಮಾರಾಟ ಜೋರಾಗಿಯೇ ನಡೆಯಿತು.

ನಗರಸಭೆ ಆಯುಕ್ತ ಶ್ರೀಕಾಂತ್ ಮಾತನಾಡಿ, ‘ಅವರೆಕಾಯಿ ಒಂದು ಕಾಲಾವರಿಯಲ್ಲಿ ಮಾತ್ರವೇ ಸಿಗುವ ಅತ್ಯಂತ ರುಚಿಕರವಾದ ತಿನಿಸು, ಇದರ ಸೊಗಡು ಕೈಬೀಸಿ ಕರೆಯುತ್ತದೆ. ಇಷ್ಟೊಂದು ರುಚಿಕರ ತರಕಾರಿ ಬೇರೊಂದಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಡಿಸೆಂಬರ್ ಅಂತ್ಯ, ಜನವರಿ ತಿಂಗಳಲ್ಲಿ ಮಾತ್ರವೇ ಸಿಗುವ ಹೊಲದ ಅವರೆಕಾಯಿ ಸುಲಿದು, ಹಿತುಕಿ ಸಾರು ಮಾಡುವುದು ಕಷ್ಟಕರವಾದರೂ ಪ್ರತಿ ಕುಟುಂಬದಲ್ಲೂ ಇದೊಂದು ಖುಷಿಯಿಂದ ಮಾಡುವ ರುಚಿಕರ ತಿನಿಸು ಆಗಿದೆ’ ಎಂದು ತಿಳಿಸಿದರು.

‘ಅವರೆಕಾಯಿ ಚಳಿಗಾಲದಲ್ಲಿ ದೇಹದ ಉಷ್ಟಾಂಶ ಹೆಚ್ಚಿಸುವ ತಿನಿಸು. ಇತರೆಲ್ಲಾ ತರಕಾರಿಗಳಿಗಿಂತ ಭಿನ್ನವಾದ ರುಚಿ, ಆಹ್ವಾಲದಕರವಿದೆ. ಒಂದೇ ಕಡೆ ಎಲ್ಲಾ ರೀತಿಯ ಅವರೇ ತಿನಿಸುಗಳನ್ನು ಸಿಗುವಂತೆ ಮಾಡಿ ಅದರ ರುಚಿಯನ್ನು ನಾಗರಿಕರು ಸವಿಯಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ’ ಎಂದರು.

ವಾಸವಿ ಯುವಜನ ಸಂಘದ ಸ್ಸ್ಯ ಪ್ರಣೀತ್ ಮಾತನಾಡಿ, ‘ಅವರೆ ಮೇಳದ ಜತೆಯಲ್ಲೇ ಸಮುದಾಯದ ಜನತೆಗೆ ಜಾತಿ ಪ್ರಮಾಣಪತ್ರ ಪಡೆಯಲು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಆರ್ಯ ವೈಶ್ಯ ಸಮುದಾಯದವರಿಗೆ ಸಂಘವೇ ಜಾತಿ ಪ್ರಮಾಣ ಪತ್ರ ಮಾಡಿಸಿಕೊಡಲು ಮುಂದಾಗಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು’ ಎಂದು ಕೋರಿದರು.

ಸಮುದಾಯದ ಮುಖಂಡರಾದ ಜಿ.ಸಿ.ರಾಜೇಶ್‌ಬಾಬು, ಜಿ.ಪಿ.ಶ್ರೀಧರ್, ಬಿ.ಆರ್.ಮಂಜುನಾಥ್, ಸೂರ್ಯನಾರಾಯಣಶೆಟ್ಟಿ, ಬುಜ್ಜಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.