ಮುಳಬಾಗಿಲು: ನಗರಸಭೆ ವ್ಯಾಪ್ತಿಯ ಖಾಸಗಿ ನಿವೇಶನ ಒಂದರಲ್ಲಿ ನಗರಸಭೆಯ ಅಧಿಕಾರಿಗಳು ಕೈಗೊಂಡ ಸ್ವಚ್ಛತೆ ಕಾರ್ಯಕ್ಕೆ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿ ಅರ್ಧಕ್ಕೆ ಸ್ಥಗಿತಗೊಳಿಸಿದರು.
ನಗರದ ಆಂಜನೇಯ ದೇವಾಲಯದ ಮುಂಭಾಗದ ಖಾಸಗಿ ನಿವೇಶನದಲ್ಲಿ ನಗರಸಭೆಯ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಸ್ವಚ್ಛತೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎರಡು ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.
‘ಕೆಲವು ದಿನಗಳಿಂದ ಆ ಖಾಸಗಿ ನಿವೇಶನದಲ್ಲಿ ಕಸ ಹೆಚ್ಚಾಗಿತ್ತು. ಕಸ ತೆರವುಗೊಳಿಸುವಂತೆ ಸುತ್ತಮುತ್ತಲಿನ ವ್ಯಾಪಾರಿಗಳು ಮನವಿ ಮಾಡಿದ್ದರು. ಈ ಪ್ರಕಾರ ಸಿಬ್ಬಂದಿ ಸ್ವಚ್ಛತೆಗೆ ಹೋದಾಗ ಕೆಲವು ಸದಸ್ಯರು, ಈ ಖಾಲಿ ನಿವೇಶನವು ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದಾಗಿದ್ದು, ಸ್ವಚ್ಛಗೊಳಿಸಬಾರದು ಎಂದರು. ಹೀಗಾಗಿ ಸ್ವಚ್ಛತೆ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು’ ಎಂದು ನಗರಸಭೆ ಪೌರಾಯುಕ್ತ ವಿ. ಶ್ರೀಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.