ಕೆಜಿಎಫ್: ಬೆಮಲ್ ಕರ್ಖಾನೆಗೆ ಶನಿವಾರ ಭೇಟಿ ನೀಡಿದ್ದ ಸಿಎಂಡಿ ಮತ್ತು ಡಿಎಚ್ ಆರ್ ಬೆಮಲ್ ಗುತ್ತಿಗೆ ನೌಕರರ ಜತೆ ಮಾತನಾಡಿ ಅವರ ಸಮಸ್ಯೆ ಆಲಿಸಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಬೆಮಲ್ ಗುತ್ತಿಗೆ ನೌಕರರನ್ನು ಏಜೆನ್ಸಿ ಮೂಲಕ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ ನಡೆಸುವಂತಿಲ್ಲ. ಸಂಸ್ಥೆಯೊಂದಿಗೆ ಯಾವುದೇ ರೀತಿ ನೇರ ವ್ಯವಹಾರ ಮಾಡಲು ಸಾಧ್ಯವಿಲ್ಲ. ಗುತ್ತಿಗೆ ನೌಕರರು ಕೆಲಸ ಮಾಡದೆ ಇರುವುದು ಮತ್ತು ನಿಗದಿತ ಸಮಯ ನಂತರ ಕಂಪನಿ ಆವರಣ ತ್ಯಜಿಸದೆ ಅಲ್ಲಿಯೇ ಇರುವುದು ಅತಿಕ್ರಮವಾಗಿದೆ. ಕಂಪನಿ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ ಕಂಪನಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.