ಕೋಲಾರ: ಜಿಲ್ಲೆಯ ಕೆಜಿಎಫ್‌ನ ಮಾರಿಕುಪ್ಪಂ ಪ್ರದೇಶದ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು ₹ 1 ಕೋಟಿಗೂ ಹೆಚ್ಚು ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಾರಿಕುಪ್ಪಂನ ಪಂಡಾರ್ ಲೈನ್‌ನ ಮನೆಯೊಂದರ ಹಿಂಭಾಗದಲ್ಲಿ ದೊಡ್ಡ ಗುಂಡಿ ತೋಡಿ ಚೀಲಗಳಲ್ಲಿ ಗಾಂಜಾ ಎಲೆಗಳನ್ನು ತುಂಬಿಸಿ ಬಚ್ಚಿಡಲಾಗಿದೆ ಎಂದು ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಆಧರಿಸಿ ಮಾರಿಕುಪ್ಪಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.
‘ಗಾಂಜಾ ಸಿಕ್ಕಿರುವ ಮನೆಯು ರೌಡಿ ತಂಗಂ ಕುಟುಂಬ ಸದಸ್ಯರಿಗೆ ಸೇರಿದೆ. ತಂಗಂನ ತಾಯಿ ಪೌಳಿ ಸೇರಿದಂತೆ ಪ್ರಕರಣದ 7 ಆರೋಪಿಗಳು ಪರಾರಿಯಾಗಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸೆ.8ರಂದು ರೌಡಿ ತಂಗಂನ ಕುಟುಂಬ ಸದಸ್ಯರ ಮತ್ತೊಂದು ಮನೆಯಲ್ಲಿ ಸುಮಾರು ₹ 1.50 ಕೋಟಿ ಮೌಲ್ಯದ ಗಾಂಜಾ ಪತ್ತೆ ಮಾಡಿದ್ದ ಮಾರಿಕುಪ್ಪಂ ಪೊಲೀಸರು ಜೋಸೆಫ್ ಎಂಬಾತನನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.