ವೇಮಗಲ್: ‘ಗ್ರಾಹಕರು ದೇವರಿದ್ದಂತೆ. ಮಳಿಗೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿದರೆ ಮಾತ್ರ ವ್ಯಾಪಾರ ಮಾಡಲು ಸಾಧ್ಯ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.
ವೇಮಗಲ್ ಗ್ರಾಮದ ಸೀತಿ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ‘ಗ್ರಾಮದಲ್ಲಿ 3 ಕಡೆ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆಗಳಿವೆ. ನಾಲ್ಕನೇಯದಾಗಿ ಆರಂಭವಾಗಿರುವ ಮಳಿಗೆಯು ಪ್ರಮುಖ ವಾಣಿಜ್ಯ ಸ್ಥಳದಲ್ಲಿದೆ’ ಎಂದರು.
‘ಮಳಿಗೆಯ ಸುತ್ತಮುತ್ತ ಸರ್ಕಾರಿ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರವಿದೆ. ಜತೆಗೆ ವಾರದ ಸಂತೆ ನಡೆಯುತ್ತದೆ. ಹೀಗಾಗಿ ಈ ಭಾಗದಲ್ಲಿ ಮಳಿಗೆಯ ಅವಶ್ಯಕತೆ ಇತ್ತು. ಗ್ರಾಹಕರೊಂದಿಗೆ ಸ್ನೇಹ ಬಾಂಧವ್ಯದಿಂದ ವರ್ತಿಸಿ ಮತ್ತು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿ’ ಎಂದು ಮಳಿಗೆ ಮಾಲೀಕರಿಗೆ ಕಿವಮಾತು ಹೇಳಿದರು.
ಮಳಿಗೆ ಮಾಲೀಕ ವಿ.ಕೆ.ಚಂದ್ರಶೇಖರ್, ಕೋಚಿಮುಲ್ ಮಾರುಕಟ್ಟೆ ಅಧೀಕ್ಷಕ ನಂಜುಂಡೇಗೌಡ, ಮೇಲ್ವಿಚಾರಕ ರಾಮೇಗೌಡ, ಗ್ರಾಮದ ಮುಖಂಡರಾದ ವಿ.ಎಂ.ಪ್ರಕಾಶ್, ರಮೇಶ್, ಬಾಬು, ಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.