ADVERTISEMENT

ಕೋಲಾರ: ಆರ್‌ಟಿಇ ಪ್ರವೇಶಾತಿಗೆ ನಿರಾಸಕ್ತಿ

ಜಿಲ್ಲೆಯಲ್ಲಿ ಇರುವುದು 390 ಸೀಟು; ಇದುವರೆಗೆ 91 ವಿದ್ಯಾರ್ಥಿಗಳಿಗೆ ಪ್ರವೇಶ

ಕೆ.ಓಂಕಾರ ಮೂರ್ತಿ
Published 3 ಜೂನ್ 2022, 5:15 IST
Last Updated 3 ಜೂನ್ 2022, 5:15 IST
ಕೃಷ್ಣಮೂರ್ತಿ
ಕೃಷ್ಣಮೂರ್ತಿ   

ಕೋಲಾರ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಜಿಲ್ಲೆಯ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ಪಡೆಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಪೋಷಕರಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದೆ.

ಜಿಲ್ಲೆಯ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿ 390 ಸೀಟುಗಳು ಮಾತ್ರ ಆರ್‌ಟಿಇ ವ್ಯಾಪ್ತಿಗೆ ಒಳಪಟ್ಟಿವೆ. ಮೊದಲ ಸುತ್ತಿನಲ್ಲಿ ಘೋಷಣೆ ಯಾಗಿ ರುವ 154 ಸೀಟುಗಳಲ್ಲಿ 84 ಸೀಟುಗಳು ಭರ್ತಿಯಾಗಿವೆ. ಎರಡನೇ ಸುತ್ತಿನಲ್ಲಿ 23 ಸೀಟು ಮಾತ್ರ ನಿಗದಿಪಡಿಸಿದ್ದು, ಇದುವರೆಗೆ 7 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲೆಂದು ಸರ್ಕಾರ ಕೆಲ ಬದಲಾವಣೆ ಮಾಡಿ ಆರ್‌ಟಿಇ ಸೀಟು ತಗ್ಗಿಸಿದ್ದರೂ ನಿರೀಕ್ಷಿಸಿದಷ್ಟು ಅರ್ಜಿಗಳು ಬರುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಕನ್ನಡ ಮಾಧ್ಯಮ ಹೊಂದಿರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಸೀಟುಗಳಿಗೆತಮ್ಮ ಮಕ್ಕಳನ್ನು ಸೇರಿಸಲು ಪೋಷಕರುಆಸಕ್ತಿ
ತೋರುತ್ತಿಲ್ಲ.

ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಶಾಲೆ ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಪೈಪೋಟಿಯೂ ಕಡಿಮೆ ಯಾಗಿದೆ.

ಜಿಲ್ಲೆಯ ಶೈಕ್ಷಣಿಕ ವಲಯಗಳಲ್ಲಿ ಕೆಜಿಎಫ್‌ ಹಾಗೂ ಶ್ರೀನಿವಾಸಪುರದಲ್ಲಿ ಆರ್‌ಟಿಇ ಸೀಟುಗಳಿಗೆ ತಕ್ಕಮಟ್ಟಿನ ಬೇಡಿಕೆ ಇದೆ. ಕೆಜಿಎಫ್‌ನಲ್ಲಿ ಲಭ್ಯ 52 ಸೀಟುಗಳಲ್ಲಿ ಈಗಾಗಲೇ 22 ವಿದ್ಯಾರ್ಥಿಗಳು, ಶ್ರೀನಿವಾಸಪುರದಲ್ಲಿ ಲಭ್ಯ 114 ಸೀಟುಗಳಲ್ಲಿ 57 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿ ದ್ದಾರೆ. ಮಾಲೂರು, ಮುಳಬಾಗಿಲು ಹಾಗೂ ಬಂಗಾರಪೇಟೆ ಶೈಕ್ಷಣಿಕ ವಲಯಗಳಲ್ಲಿ ಶೂನ್ಯ ದಾಖಲಾತಿ ಇದೆ. ಕೋಲಾರ ತಾಲ್ಲೂಕು ಕೂಡ ಹಿಂದೆ
ಬಿದ್ದಿದೆ.

ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯದಿಂದ, ಬಡಕುಟುಂಬದ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ದೊರೆ ಯಲಿ ಎನ್ನುವ ಉದ್ದೇಶದಿಂದ 2009ರಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಜಾರಿಗೊಳಿಸಿತ್ತು. ಕಾಯ್ದೆಯಡಿ ಯಾವುದೇ ಮಗು ಸರ್ಕಾರಿ ಕೋಟಾದಡಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲ ಕಲ್ಪಿಸಲಾಗಿತ್ತು.

ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ, 2019ರಲ್ಲಿ ತಂದ ತಿದ್ದುಪಡಿ ಬಳಿಕ ಬೇಡಿಕೆ ಕುಸಿದಿದ್ದು, ಹಲವು ನ್ಯೂನತೆಗಳಿರುವ ಬಗ್ಗೆ ಪೋಷಕರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.