ADVERTISEMENT

ಮುಳಬಾಗಿಲು: ಶುದ್ಧ ಕುಡಿಯುವ ನೀರಿನ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:50 IST
Last Updated 9 ಜುಲೈ 2024, 13:50 IST
ಮುಳಬಾಗಿಲು ತಾಲ್ಲೂಕಿನ ಶೀಗೆಹಳ್ಳಿಯಲ್ಲಿ ಕಾರ್ಯಾರಂಭವಾದ ಶುದ್ಧ ಕುಡಿಯುವ ನೀರಿನ ಘಟಕ 
ಮುಳಬಾಗಿಲು ತಾಲ್ಲೂಕಿನ ಶೀಗೆಹಳ್ಳಿಯಲ್ಲಿ ಕಾರ್ಯಾರಂಭವಾದ ಶುದ್ಧ ಕುಡಿಯುವ ನೀರಿನ ಘಟಕ    

ಮುಳಬಾಗಿಲು: ತಾಲ್ಲೂಕಿನ ಶೀಗೆಹಳ್ಳಿಯಲ್ಲಿ ಲಕ್ಷಾಂತರ ವೆಚ್ಚದಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಮಂಗಳವಾರ ಕಾರ್ಯಾರಂಭವಾಗಿದೆ.

ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೀಗೆಹಳ್ಳಿಯಲ್ಲಿ ಸುಸಜ್ಜಿತ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದರೂ, ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಇದರಿಂದ ಉಳ್ಳವರು ದೂರದಿಂದ ಶುದ್ಧ ಕುಡಿಯುವ ನೀರನ್ನು ತಂದು ಕುಡಿದರೆ, ಬಡವರು ಕೊಳವೆಬಾವಿ ನೀರನ್ನೇ ಕುಡಿಯುವಂತಾಗಿದೆ.

ಈ ಬಗ್ಗೆ ಜೂನ್ 30ರಂದು ಪ್ರಜಾವಾಣಿಯಲ್ಲಿ ‘ವರ್ಷ ಕಳೆದರೂ ಆರಂಭವಾಗದ ಶುದ್ಧ ನೀರಿನ ಘಟಕ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಗೆ ಸ್ಪಂದಿಸಿದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಸರ್ವೇಶ್ ಹಾಗೂ ಪಿಡಿಒ ಸರಿತಾ ಮರುದಿನವೇ ಘಟಕದ ಸುತ್ತಲೂ ಇದ್ದ ಗಿಡಗಂಟೆ ಸ್ವಚ್ಚಗೊಳಿಸಲಾಯಿತು. ನಂತರ ಯಂತ್ರಗಳಲ್ಲಿ ಇದ್ದ ತಾಂತ್ರಿಕ ದೋಷ ಸರಿಪಡಿಸಿ ಮಂಗಳವಾರ ಘಟಕದಿಂದ ನೀರನ್ನು ಗ್ರಾಮಸ್ಥರಿಗೆ ಒದಗಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.