ADVERTISEMENT

ಬೇತಮಂಗಲ ದಸರಾ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:29 IST
Last Updated 21 ಅಕ್ಟೋಬರ್ 2024, 14:29 IST
ಬೇತಮಂಗಲ ಗ್ರಾಮದಲ್ಲಿ ಸುವರ್ಣ ಭೂಮಿ ಟ್ರಸ್ಟ್ ವತಿಯಿಂದ ಬೇತಮಂಗಲ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು 
ಬೇತಮಂಗಲ ಗ್ರಾಮದಲ್ಲಿ ಸುವರ್ಣ ಭೂಮಿ ಟ್ರಸ್ಟ್ ವತಿಯಿಂದ ಬೇತಮಂಗಲ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು    

ಬೇತಮಂಗಲ: ಇಲ್ಲಿನ ಸರ್ಕಾರಿ ಕನ್ನಡ ಹಿರಿಯ ಮಾದರಿ ಮತ್ತು ಉರ್ದು ಶಾಲಾವರಣದಲ್ಲಿ ಸೋಮವಾರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡುವ ಮೂಲಕ ಬೇತಮಂಗಲ ದಸರಾ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತು. ಸುವರ್ಣ ಭೂಮಿ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಕಬಡ್ಡಿ ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡವು. 

ಬೇತಮಂಗಲ ವೃತ್ತ ನಿರೀಕ್ಷಕ ರಂಗಶಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ದುರದೃಷ್ಟಕರ ಸಂಗತಿ. ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿರುವುದರಿಂದ ದುಶ್ಚಟಗಳಿಂದ ದೂರವಿರಬಹುದು. ಜೊತೆಗೆ ಸದೃಢ ದೇಹ ಕಾಪಾಡಿಕೊಳ್ಳಬಹುದು ಎಂದರು. 

ADVERTISEMENT

ಸಮಾಜ ಸೇವಕ ವಿ.ಮೋಹನ್ ಕೃಷ್ಣ ಮಾತನಾಡಿದರು.

ಬೇತಮಂಗಲದಲ್ಲಿ ಕ್ರೀಡಾಕೂಟ ಆಯೋಜನೆಯು ಉತ್ತಮ ಕೆಲಸ. ಅದೇ ರೀತಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ಬೇತಮಂಗಲದಲ್ಲಿ ನಡೆಯಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೂ ಕಾರ್ತಿಕ್ ಆಶಿಸಿದರು. 

ಬೇತಮಂಗಲ ದಸರಾ ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಕಬಡ್ಡಿ ತಂಡಗಳು ಪಾಲ್ಗೊಂಡಿದ್ದವು.

ಪ್ರಥಮ ಬಹುಮಾನ ₹20 ಸಾವಿರ ನಗದು, ದ್ವಿತೀಯ ಬಹುಮಾನ ₹10 ಸಾವಿರ, ತೃತೀಯ ಬಹುಮಾನ ₹5 ಸಾವಿರ, ನಾಲ್ಕನೇ ಬಹುಮಾನ ₹2 ಸಾವಿರ ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. 

ಸಮಾಜ ಸೇವಕ ವಿ.ಮೋಹನ್ ಕೃಷ್ಣ, ವಿನು ಕಾರ್ತಿಕ್, ಅಯ್ಯಪಲ್ಲಿ ಮಂಜುನಾಥ್, ಶ್ರೀ ಹರಿ, ಮಮತಾ ಗಣೇಶ, ಅಕಿಲ್ ಪಾಷಾ, ಮಹಾದೇವ್ ನಾಯಕ್, ರಂಗಶಾಮಯ್ಯ, ಗುರುರಾಜ್ ಚಿಂತೆ ಕಾಲ್, ಡಾ.ಕೃಷ್ಣಮೂರ್ತಿ, ಸತೀಶ್, ಸತೀಶ್, ಶಿಕ್ಷಕ ಶಂಕರ್, ಜೈ ಭೀಮ್ ಶ್ರೀನಿವಾಸ್, ಶ್ರೀನಾಥ್ ನಾಸ್ತಿಕ, ಭಟ್ರಕುಪ್ಪ ಅರುಣ್, ರಾಂ ಬಾಬು, ಉಮೇಶ್, ಕೆ.ಸಿ.ನಾಗರಾಜ್, ಪ್ರೆಸ್ ಮಂಜು, ಹರೀಶ್, ಪ್ರಶಾಂತ್ ಭಾಗವಹಿಸಿದ್ದರು. 

ಬೇತಮಂಗಲ ದಸರಾ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.