ADVERTISEMENT

ಕೋಲಾರ | ಮಳೆಯಿಲ್ಲದೆ ಬರಿದಾದ ಕೆರೆ, ಕುಂಟೆ: ಜಾನುವಾರುಗಳಿಗೆ ಮೇವು, ನೀರಿನ ಅಭಾವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 14:08 IST
Last Updated 5 ಏಪ್ರಿಲ್ 2024, 14:08 IST
‌ಟೇಕಲ್‌ ಬಳಿಯ ಕಂಚುಗಾರನಕೆರೆ ನೀರಿಲ್ಲದೆ ಬತ್ತಿರುವುದು
‌ಟೇಕಲ್‌ ಬಳಿಯ ಕಂಚುಗಾರನಕೆರೆ ನೀರಿಲ್ಲದೆ ಬತ್ತಿರುವುದು   

ಟೇಕಲ್: ಬರಗಾಲದಿಂದ ಕೆರೆ, ಕುಂಟೆಗಳು ಒತ್ತಿದ್ದು, ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ಎದುರಾಗಿದೆ.

ರೈತರ ಜೀವನಾಡಿ ಕೆರೆ, ಕುಂಟೆ, ಇದರಲ್ಲಿ ನೀರು ತುಂಬಿದ್ದರೆ ರೈತರು ತರಕಾರಿ, ಸೊಪ್ಪು ಬೆಳೆದು ಜೀವನ ನಡೆಸುವವರು. ಜತೆಗೆ ಹೈನುಗಾರಿಕೆಯನ್ನು ಮಾಡುವವರು. ಆದರೆ ಈ ಬಾರಿ ಮಳೆ ಸಮಸ್ಯೆಯಿಂದ ಕೆರೆಗಳು ಬತ್ತಿದ್ದು ಜಾನುವಾರು ಹಾಗೂ ಪ್ರಾಣಿಗಳಿಗೆ ಕುಡಿಯಲೂ ನೀರು ಸಿಗದಂತಾಗಿದೆ. ಜಾನುವಾರು ಮೇಯಲು ಬಯಲಿಗೆ ಹೋದರೆ ನೀರು ಕುಡಿಯಲು ಮನೆ ಬಳಿಯೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನೂ ಕಾಡು ಪ್ರಾಣಿಗಳಿಗೆ ಮೇವು, ನೀರಿನ ಸಮಸ್ಯೆ ತೀರವಾಗಿ ಕಾಡುತ್ತಿದೆ.

ಪ್ರಸ್ತುತ ಪ್ರಾಣಿಗಳಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯವಾಗಿದೆ. ಇದರಿಂದ ಪ್ರಾಣಿಗಳಿಗೆ ರೋಗಗಳು ಹರಡುತ್ತಿವೆ. ಇಷ್ಟೇ ಅಲ್ಲದೆ ಮೇವು, ನೀರನ್ನು ಹರಿಸಿ ಕಾಡಿಂದ ನಾಡಿಗೆ ಕೆಲವು ಪ್ರಾಣಿಗಳು ಬರುತ್ತಿದ್ದು, ನಾಯಿಗಳ ಹಾವಳಿ ಹಾಗೂ ವಾಹನಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.

ADVERTISEMENT

ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದ್ದು, ಕೆಲವು ರೈತರು ರಾಸುಗಳನ್ನು ಸಾಕಲು ಕಷ್ಟವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಜಾನುವಾರುಗಳಿಗೆ ಹಸಿ ಮೇವು ಇಲ್ಲವಾಗಿ ಹಾಲಿನ ಇಳುವರಿಯೂ ಕಡಿಮೆಯಾಗಿದೆ. ಹಾಗಾಗಿ ಸರ್ಕಾರ ಈ ಸಂಕಷ್ಟದ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ರಾಸುಗಳಿಗೆ ಮೇವಿನ ಸಮಸ್ಯೆ ತಲೆದೋರಿದ್ದು ಬೇರೆ ಕಡೆಯಿಂದ ಒಣಮೇವನ್ನು ಸರಬರಾಜು ಮಾಡುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.