ಕೋಲಾರ: ಭೂದಾನ, ಗೋದಾನ, ನೇತ್ರದಾನ, ಅನ್ನದಾನಕ್ಕಿಂತ ವಿದ್ಯಾದಾನ ದಾನಗಳಲ್ಲಿಶ್ರೇಷ್ಠ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮೊದಲು ಜ್ಞಾನವನ್ನು ತುಂಬಬೇಕು. ಜ್ಞಾನವೇ ಅವರ ಆಸ್ತಿ ಆಗಬೇಕು ಆಗ ಮಾತ್ರ ಅವರು ಬುದ್ಧಿಜೀವಿಗಳ ಆಗುತ್ತಾರೆ ಸಮಾಜ ತಿದ್ದುವ, ಆದರ್ಶ ಮೂರ್ತಿಗಳು ಆಗುತ್ತಾರೆ ಎಂದರು.
ಪ್ರಾಥಮಿಕ ಹಂತದಲ್ಲಿ ಪೋಷಕರ ಜೊತೆ ಜೊತೆಗೆ ಸಾರ್ವಜನಿಕರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಪರಿಕರಗಳನ್ನು ದಾನದ ರೂಪದಲ್ಲಿ ನೀಡಿದರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಾವು ಯಾವುದರಲ್ಲಿ ಕಮ್ಮಿಯಿಲ್ಲ ಎಂಬಂತೆ ಬೆಳೆದು ಉತ್ತಮ ಜ್ಞಾನದಾಸೋಹಿಗಳಾಗುತ್ತಾರೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ, ತಾಲ್ಲೂಕಿನಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವ ಬಳಗದ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸುತ್ತಿರುವ ಸಂಸ್ಥೆಯ ಉದಾರತೆಯನ್ನು ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರತ್ನಮ್ಮ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯೆ ಅಂಬಿಕಾ, ಮುಖ್ಯೋಪಾಧ್ಯಾಯ ಶ್ರೀನಿವಾಸ್, ಸಹಶಿಕ್ಷಕರಾದ ಗೋವಿಂದಪ್ಪ, ಮೀನಾ, ಕೃಷ್ಣಪ್ಪ, ಮುನಿಯಪ್ಪ, ಸೊಣ್ಣೇಗೌಡ, ಮಮತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.