ADVERTISEMENT

18 ತಾಸು ದುರಸ್ತಿ: ಕೆರೆಯಿಂದ ಚೆನ್ನೈಗೆ ಹಾರಿದ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:00 IST
Last Updated 30 ಸೆಪ್ಟೆಂಬರ್ 2024, 23:00 IST
ಬಂಗಾರಪೇಟೆ ತಾಲ್ಲೂಕಿನ ದೊಡ್ಡೋರು ಕರಪನಹಳ್ಳಿ ಕೆರೆಯಲ್ಲಿ ಹೆಲಿಕಾಪ್ಟರ್‌
ಬಂಗಾರಪೇಟೆ ತಾಲ್ಲೂಕಿನ ದೊಡ್ಡೋರು ಕರಪನಹಳ್ಳಿ ಕೆರೆಯಲ್ಲಿ ಹೆಲಿಕಾಪ್ಟರ್‌   

ಬಂಗಾರಪೇಟೆ: ತಾಂತ್ರಿಕ ದೋಷದಿಂದ ಭಾನುವಾರ ಸಂಜೆ ತಾಲ್ಲೂಕಿನ ಡಿ.ಕೆ ಹಳ್ಳಿಯ ಖಾಲಿ ಕೆರೆಯಲ್ಲಿ ಇಳಿದಿದ್ದ ಭಾರತೀಯ  ವಾಯುಪಡೆಯ ಹೆಲಿಕಾಪ್ಟರ್ 18 ತಾಸು ದುರಸ್ತಿ ನಂತರ ಸೋಮವಾರ ಸಂಜೆ  ಚೆನ್ನೈನ ತಾಂಬರಂ ವಾಯುನೆಲೆಯತ್ತ ಹಾರಿತು.

ಭಾನುವಾರ ಸಂಜೆಯೇ ಬೆಂಗಳೂರಿನಿಂದ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಬಂದಿದ್ದ ವಾಯುಪಡೆಯ ತಾಂತ್ರಿಕ ತಂಡವೊಂದು ಹೆಲಿಕಾಪ್ಟರ್ ದುರಸ್ತಿ ಕಾರ್ಯ ಕೈಗೊಂಡಿತ್ತು.

ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ಗಳು ಸೇರಿದಂತೆ ಆರು ಜನ ವಾಯುಸೇನೆಯ ಸಿಬ್ಬಂದಿ ಮತ್ತು 10ಕ್ಕೂ ಹೆಚ್ಚು ಮಂದಿ ಯೋಧರು ಭಾನುವಾರ ರಾತ್ರಿ ಸ್ಥಳದಲ್ಲೇ ಬೀಡು ಬಿಟ್ಟಿದ್ದರು.

ADVERTISEMENT

ಹೆಲಿಕಾಪ್ಟರ್ ಇಳಿದ ಸ್ಥಳದಲ್ಲಿ ಬಂಗಾರಪೇಟೆ ಪೊಲೀಸರು ಭದ್ರತೆ ಒದಗಿಸಿದ್ದರು. ಸೋಮವಾರ ಬೆಳಗ್ಗೆ ತಾಂತ್ರಿಕ ದೋಷ ಸರಿಪಡಿಸಿದ ನಂತರ ಹೆಲಿಕಾಪ್ಟರ್ ಚೆನ್ನೈನ ತಾಂಬರಂನತ್ತ ಹೊರಟಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.