ADVERTISEMENT

ಮಾಲೂರು | ತಿಂಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭ: ಶಾಸಕ ಕೆ.ವೈ. ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:44 IST
Last Updated 30 ಸೆಪ್ಟೆಂಬರ್ 2024, 14:44 IST
ಮಾಲೂರು ಪಟ್ಟಣದ ಮಾರಿಕಾಂಬ ವೃತ್ತದ ಬಳಿಯ ತಾಲ್ಲೂಕು ಪಂಚಾಯಿತಿ ನಿವೇಶನದಲ್ಲಿ ಮುಕ್ತಾಯ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್ ಕಟ್ಟಡದ ಬಳಿ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಪುರಸಭಾಧ್ಯಕ್ಷೆ ಕೋಮಲ ಇದ್ದಾರೆ.
ಮಾಲೂರು ಪಟ್ಟಣದ ಮಾರಿಕಾಂಬ ವೃತ್ತದ ಬಳಿಯ ತಾಲ್ಲೂಕು ಪಂಚಾಯಿತಿ ನಿವೇಶನದಲ್ಲಿ ಮುಕ್ತಾಯ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್ ಕಟ್ಟಡದ ಬಳಿ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಪುರಸಭಾಧ್ಯಕ್ಷೆ ಕೋಮಲ ಇದ್ದಾರೆ.   

ಮಾಲೂರು: ಪಟ್ಟಣದ ಮಾರಿಕಾಂಬ ವೃತ್ತದ ಬಳಿಯ ತಾಲ್ಲೂಕು ಪಂಚಾಯಿತಿ ನಿವೇಶನದಲ್ಲಿ ಮುಕ್ತಾಯದ ಹಂತದಲ್ಲಿರುವ ಇಂದಿರಾ ಗಾಂಧಿ ಕ್ಯಾಂಟೀನ್ ಕಟ್ಟಡದ ಬಳಿ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದರು. 

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ಹಳ್ಳಿಯಿಂದ ಪಟ್ಟಣಕ್ಕೆ ಬರುವ ರೈತರು ಮತ್ತು ಬಡವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟಿನ್ ಅನ್ನು ಒಂದು ತಿಂಗಳ ಒಳಗೆ ಆರಂಭಿಸಲಾಗುವುದು’ ಎಂದು ತಿಳಿಸಿದರು. 

ಇಂದಿರಾ ಕ್ಯಾಂಟಿನ್ ಸ್ತಾಪನೆಗೆ ಈ ಹಿಂದಿನ ಬಿಜೆಪಿ ಸರ್ಕಾರ ನಮಗೆ ಅವಕಾಶ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟಿನ್ ಆರಂಭದಿಂದ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವ ರೈತರು ಹಾಗೂ ಸ್ಥಳೀಯ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್, ವಿಜಯಲಕ್ಷ್ಮಿ ಕೃಷ್ಣಪ್ಪ, ಪ್ರದೀಪ್ ಕುಮಾರ್, ಎ.ರಾಜಪ್ಪ, ವಿಜಯಲಕ್ಷ್ಮಿ, ಚೈತ್ರಾ, ಮುನಿರಾಜು, ವೆಂಕಟೇಶ್, ವಿಜಯನಾರಸಿಂಹ, ಕೆಎಚ್. ಚನ್ನರಾಯಪ್ಪ, ಹನುಮಂತರೆಡ್ಡಿ, ಮಂಜು, ಶಬ್ಬಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.