ADVERTISEMENT

ಕೆಜಿಎಫ್‌ಗೆ ಬಂದಿಳಿದ ಕನ್ನಡ ರಥ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:20 IST
Last Updated 23 ನವೆಂಬರ್ 2024, 15:20 IST
ಕೆಜಿಎಫ್‌ ಬೆಮಲ್‌ ನಗರದ ಬಳಿ ವಿವಿಧ ವೇಷಭೂಷಣಗಳನ್ನು ಹಾಕಿದ್ದ ವಿದ್ಯಾರ್ಥಿನಿಯರು ಶನಿವಾರ ಕನ್ನಡ ರಥಕ್ಕೆ ಸ್ವಾಗತ ಕೋರಿದರು.
ಕೆಜಿಎಫ್‌ ಬೆಮಲ್‌ ನಗರದ ಬಳಿ ವಿವಿಧ ವೇಷಭೂಷಣಗಳನ್ನು ಹಾಕಿದ್ದ ವಿದ್ಯಾರ್ಥಿನಿಯರು ಶನಿವಾರ ಕನ್ನಡ ರಥಕ್ಕೆ ಸ್ವಾಗತ ಕೋರಿದರು.   

ಕೆಜಿಎಫ್‌: ಬಂಗಾರಪೇಟೆಯಿಂದ ಶನಿವಾರ ತಾಲ್ಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವನ್ನು ಬೆಮಲ್‌ ನಗರದ ಬಳಿ ತಾಲ್ಲೂಕು ಆಡಳಿತದಿಂದ ಭವ್ಯ ಸ್ವಾಗತ ಕೋರಲಾಯಿತು.

ತಹಶೀಲ್ದಾರ್‌ ಕೆ.ನಾಗವೇಣಿ ಬಂಗಾರಪೇಟೆಯ ತಾಲ್ಲೂಕು ಆಡಳಿತದಿಂದ ರಥವನ್ನು ಬೆಮಲ್‌ ವಿಶ್ವೇಶ್ವರಯ್ಯ ಕಮಾನಿನ ಬಳಿ ಸ್ವೀಕರಿಸಿದರು. ಬೆಮಲ್‌ ಕನ್ನಡ ಮಿತ್ರರು, ಕರ್ನಾಟಕ ರಕ್ಷಣಾ ವೇದಿಕೆ, ರಾಬರ್ಟಸನ್‌ಪೇಟೆ ಕನ್ನಡ ಸಂಘ, ಬೆಮಲ್‌ ಕಾರ್ಮಿಕ ಸಂಘದ ಪದಾಧಿಕಾರಿಗಳು ರಥಕ್ಕೆ ಪೂಜೆ ಸಲ್ಲಿಸಿದರು. ಬೆಮಲ್‌ ಸಂಯುಕ್ತ ಕಿರಿಯ ಕಾಲೇಜು ಮತ್ತು ಸುತ್ತಮುತ್ತಲಿನ ಶಾಲೆಗಳ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ರಥದ ಜೊತೆಗೆ ಹೆಜ್ಜೆ ಹಾಕಿದರು. ಶಾಲಾ ಮಕ್ಕಳು ಪೂರ್ಣಕುಂಭ ಸ್ವಾಗತ ನೀಡಿದರು. ನಂತರ ಆಲದ ಮರದ ಬಳಿ ಕೊಂಚ ಕಾಲ ನಿಂತ ರಥಕ್ಕೆ ಬೆಮಲ್‌ ಕನ್ನಡ ಪರ ಸಂಘಟನೆಗಳ ಮುಖಂಡರು ಪೂಜೆ ಸಲ್ಲಿಸಿದರು. ಫೈಲೈಟ್ಸ್‌ ವೃತ್ತದ ಬಳಿಗೆ ಆಗಮಿಸಿದಾಗ, ಮುಷ್ಕರ ನಿರತ ಬೆಮಲ್‌‌ ಗುತ್ತಿಗೆ ಕಾರ್ಮಿಕರು ಕೂಡ ರಥಕ್ಕೆ ಸ್ವಾಗತ ನೀಡಿದರು.

ರಾಬರ್ಟಸನ್‌ಪೇಟೆ ತಲುಪಿದ ರಥಕ್ಕೆ ಪೂಜೆ ಸಲ್ಲಿಸಿದ ಶಾಸಕಿ ಎಂ.ರೂಪಕಲಾ, ರಥದ ಜೊತೆಗೆ ಸ್ವಲ್ಪ ದೂರ ಹೆಜ್ಜೆ ಹಾಕಿದರು. ರಾಬರ್ಟಸನ್‌ಪೇಟೆಯ ಮೂಲಕ ಕ್ಯಾಸಂಬಳ್ಳಿ ಗ್ರಾಮಕ್ಕೆ ಆಗಮಿಸಿದ ರಥಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ಮತ್ತು ಪಂಚಾಯಿತಿ ಸದಸ್ಯರು ಸ್ವಾಗತ ಮಾಡಿದರು. ಗ್ರಾಮದಲ್ಲಿ ಮೆರವಣಿಗೆ ನಡೆಸಿದ ರಥ ಬೇತಮಂಗಲ ಮೂಲಕ ತೆರಳಿತು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ ರೆಡ್ಡಿ, ಮುಖಂಡರಾದ ತ್ಯಾಗರಾಜ್‌, ಬಾ.ಹಾ.ಶೇಖರಪ್ಪ, ಮಂಜುನಾಥ ನಾಯಕ್‌, ಕುಬೇರಪ್ಪ, ಮುನಿರಾಜು, ಅಶ್ವಥ್‌, ಅಶೋಕ ಲೋಣಿ. ಕೋಗಿಲಹಳ್ಳಿ ಕೃಷ್ಣಪ್ಪ ಹಾಜರಿದ್ದರು. ತಹಶೀಲ್ದಾರ್‌ ಕೆ.ನಾಗವೇಣಿ ಮತ್ತು ಸಿಡಿಪಿಒ ರಾಜೇಶ್‌ ಹೊರೆತುಪಡಿಸಿ ಉಳಿದ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.