ಕೋಲಾರ: ‘ಜಿಲ್ಲೆಯ ಆರು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯುತ್ತಿದ್ದು, ಮಂಗಳವಾರ ಇತಿಹಾಸ ವಿಷಯಕ್ಕೆ 44 ಹಾಗೂ ಭೌತ ವಿಜ್ಞಾನ ವಿಷಯಕ್ಕೆ 55 ಮಂದಿ ಗೈರಾಗಿದ್ದರು.
ಇತಿಹಾಸ ಪರೀಕ್ಷೆಗೆ ಒಟ್ಟು 481 ಮಂದಿ ಹೆಸರು ನೋಂದಾಯಿಸಿದ್ದು, 437 ಮಂದಿ ಹಾಜರಾಗಿದ್ದಾರೆ. ಭೌತ ವಿಜ್ಞಾನ ವಿಷಯಕ್ಕೆ 710 ಮಂದಿ ಹೆಸರು ನೋಂದಾಯಿಸಿದ್ದು, 655 ಮಂದಿ ಪರೀಕ್ಷೆ ಬರೆದಿದ್ದಾರೆ.
‘ಪ್ರತಿ ತಾಲ್ಲೂಕಿಗೆ ಒಂದರಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಯಾವುದೇ ಗೊಂದಲ ಉಂಟಾಗಿಲ್ಲ, ಅವ್ಯವಹಾರ ನಡೆದ ಬಗ್ಗೆ ವರದಿಯಾಗಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.
ಕೋಲಾರದ ಬಾಲಕರ ಸರ್ಕಾರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇತಿಹಾಸ ವಿಷಯಕ್ಕೆ 66 ಮಂದಿ ನೋಂದಾಯಿಸಿದ್ದು, 61 ಮಂದಿ ಹಾಜರಾಗಿದ್ದರು. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 31 ಮಂದಿ ನೋಂದಾಯಿಸಿದ್ದು, 28 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 78 ಮಂದಿ ಹೆಸರು ನೋಂದಾಯಿಸಿದ್ದು, 66 ಮಂದಿ ಹಾಜರಾಗಿದ್ದರು. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 79 ಮಂದಿ ನೋಂದಾಯಿಸಿದ್ದು, 73 ಮಂದಿ ಪರೀಕ್ಷೆ ಬರೆದಿದ್ದಾರೆ.
ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 101 ಮಂದಿ ಹೆಸರು ನೋಂದಾಯಿಸಿದ್ದು, 89 ಮಂದಿ ಹಾಜರಾಗಿದ್ದಾರೆ. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ 126 ಮಂದಿ ಹೆಸರು ನೋಂದಾಯಿಸಿದ್ದು, 120 ಮಂದಿ ಹಾಜರಾಗಿದ್ದಾರೆ.
ಕೋಲಾರದ ಬಾಲಕರ ಸರ್ಕಾರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭೌತ ವಿಜ್ಞಾನ ವಿಷಯಕ್ಕೆ 317 ಮಂದಿ ನೋಂದಾಯಿಸಿದ್ದು, 291 ಮಂದಿ ಹಾಜರಾಗಿದ್ದಾರೆ. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 54 ಮಂದಿ ನೋಂದಾಯಿಸಿದ್ದು, 48 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 66 ಮಂದಿ ಹೆಸರು ನೋಂದಾಯಿಸಿದ್ದು, 59 ಮಂದಿ ಹಾಜರಾಗಿದ್ದರು. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 102 ಮಂದಿ ನೋಂದಾಯಿಸಿದ್ದು, 97 ಮಂದಿ ಪರೀಕ್ಷೆ ಬರೆದಿದ್ದಾರೆ.
ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 50 ಮಂದಿ ಹೆಸರು ನೋಂದಾಯಿಸಿದ್ದು, 49 ಮಂದಿ ಹಾಜರಾಗಿದ್ದರು. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ 121 ಮಂದಿ ಹೆಸರು ನೋಂದಾಯಿಸಿದ್ದು, 111 ಮಂದಿ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.