ADVERTISEMENT

ಬ್ಯಾರಿಕೇಡ್‌ ಅಳವಡಿಕೆ: ಜನರಲ್ಲಿ ಗೊಂದಲ

ಬ್ಯಾರಿಕೇಡ್

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:31 IST
Last Updated 12 ಮೇ 2024, 15:31 IST
ನಾಮಫಲಕ ಹಾಗೂ ಬ್ಯಾರಿಕೇಡ್‌ಗಳನ್ನು ನಂಗಲಿ ಪೊಲೀಸರು ಗಡಿಯೊಳಗೆ ಹಾಕಿರುವುದು
ನಾಮಫಲಕ ಹಾಗೂ ಬ್ಯಾರಿಕೇಡ್‌ಗಳನ್ನು ನಂಗಲಿ ಪೊಲೀಸರು ಗಡಿಯೊಳಗೆ ಹಾಕಿರುವುದು   

ಮುಳಬಾಗಿಲು: ನಂಗಲಿ ಪೊಲೀಸ್ ಸರಹದ್ದು 500 ಮೀಟರ್ ಒಳಗೆ ಪ್ರಾರಂಭ ಎಂದು ಬ್ಯಾರಿಕೇಡ್‌ ಅಳವಡಿಸಿರುವುದರಿಂದ ರಾಜ್ಯದ ಗಡಿ ಜನರು ಗೊಂದಲಕ್ಕೆ ಸಿಲುಕಿದ್ದಾರೆ.

ರಾಜ್ಯದ ಕೊನೆ ಪೊಲೀಸ್ ಠಾಣೆ ಸರಹದ್ದು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಕಟ್ಟಕಡೆ ಗಡಿ ಗ್ರಾಮದಿಂದ ಪ್ರಾರಂಭವಾಗುತ್ತದೆ. ಬ್ಯಾರಿಕೇಡ್‌ ಅಳವಡಿಸಿರುವ ಸ್ಥಳದಿಂದ ರಾಜ್ಯದ ಗಡಿ ಹಾಗೂ ತಾಲ್ಲೂಕಿನ ವ್ಯಾಪ್ತಿ ಇನ್ನೂ ಸುಮಾರು 500 ರಿಂದ 600 ಮೀಟರ್ ಇದೆ.

ಆದರೆ, ನಂಗಲಿ ಪೊಲೀಸ್ ಠಾಣೆ ಅಧಿಕಾರಿಗಳು ಗಡಿಯಲ್ಲಿ ಹಾಕಬೇಕಾಗಿರುವ ಸರಹದ್ದಿನ ನಾಮಫಲಕ ಹಾಗೂ ಬ್ಯಾರಿಕೇಡ್‌ ಸ್ಥಳಾಂತರ ಮಾಡಿ ವ್ಯಾಪ್ತಿಯನ್ನೇ ಬಿಟ್ಟು ಹಾಕಿದ್ದಾರೆ. ಇದರಿಂದ ಬ್ಯಾರಿಕೇಡ್‌ ಆಚೆಗೆ ಇರುವ ರಾಜ್ಯ ಹಾಗೂ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳು ಆಂಧ್ರಪ್ರದೇಶಕ್ಕೆ ಸೇರಿದೆಯೇ ಎಂದು ಸಂಶಯ ಪಡುವಂತಾಗಿದೆ.

ADVERTISEMENT

ನಂಗಲಿ ಪೊಲೀಸ್ ಸಬ್‌ಇನ್ ಸ್ಪೆಕ್ಟರ್ ಅರ್ಜುನ್ ಎಸ್.ಆರ್.ಗೌಡ ಅವರನ್ನು ದೂರವಾಣಿ ಮೂಲಕ‌ ಸಂಪರ್ಕಿಸಿದರೆ ಗಡಿಯಲ್ಲಿಯೂ ಬ್ಯಾರಿಕೇಡ್‌  ಹಾಕಿ ಅವುಗಳ ಮೇಲೆ ನಂಗಲಿ ಸರಹದ್ದು ಪ್ರಾರಂಭ ಎಂದು ಬರೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.