ADVERTISEMENT

ಬಂಗಾರಪೇಟೆ | ಕುಸಿಯುವ ಹಂತದಲ್ಲಿ ಶಾಲಾ ಕೊಠಡಿ

ಭಯದಿಂದ ಪಾಠ ಕೇಳುವ ಶಾಲಾ ಮಕ್ಕಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 7:59 IST
Last Updated 30 ಜೂನ್ 2024, 7:59 IST
ಬಂಗಾರಪೇಟೆ ತಾಲ್ಲೂಕಿನ ತಳೂರು ಕಿರಿಯ ಪ್ರಾಥಮಿಕ ಶಾಲಾ ವಟಾರದ ಕಂಬದ ಸಿಮೆಂಟ್ ಕಿತ್ತುಹೋಗಿರುವುದು
ಬಂಗಾರಪೇಟೆ ತಾಲ್ಲೂಕಿನ ತಳೂರು ಕಿರಿಯ ಪ್ರಾಥಮಿಕ ಶಾಲಾ ವಟಾರದ ಕಂಬದ ಸಿಮೆಂಟ್ ಕಿತ್ತುಹೋಗಿರುವುದು   

ಬಂಗಾರಪೇಟೆ: ಮುರಿದ ಕಿಟಕಿ, ಬಾಗಿಲು, ಉದುರುತ್ತಿರುವ ಚಾವಣಿ ಸಿಮೆಂಟ್, ಬಿರುಕು ಬಿಟ್ಟ ಗೋಡೆ.. ಇದು ದೋಣಿಮಡಗು ಗ್ರಾಮ ಪಂಚಾಯಿತಿಯ ಸಾಕರಸನಹಳ್ಳಿ, ಕುಂದರಸನಹಳ್ಳಿ, ತಳೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

ಶಾಲಾ ಕಟ್ಟಡಗಳು ಸುಣ್ಣ, ಬಣ್ಣ ಕಂಡು ವರ್ಷಗಳು ಕಳೆದಿದ್ದು, ಮಳೆ ಬಂದರೆ ಚಾವಣಿಯಿಂದ ನೀರು ಸೋರುತ್ತಿದೆ. ಬಿರುಕು ಬಿಟ್ಟಿರುವ ಗೋಡೆಗಳು, ಕುಸಿಯುವ ಹಂತದಲ್ಲಿ ಶಾಲಾ ಕೊಠಡಿಗಳಿವೆ. ಹಾಗಾಗಿ ಶಾಲಾ ಮಕ್ಕಳು ಭಯದಿಂದ ಪಾಠ ಕೇಳುವಂತಾಗಿದೆ.

ಕಟ್ಟಡ ನೋಡಿದರೆ ಇದು ಶಾಲೆಯೋ ಅಥವಾ ಪಾಳು ಬಿದ್ದಿರುವ ಕಟ್ಟಡವೋ ಎಂಬ ಅನುಮಾನ ಮೂಡುವಂತಿದೆ. ಶೌಚಾಲಯಗಳು ಹೆಸರಿಗಿದ್ದರೂ, ಬಳಸಲು ಯೋಗ್ಯವಾಗಿಲ್ಲ. ಜತೆಗೆ ಸ್ವಚ್ಛಗೊಳಿಸದ ಕಾರಣ ದುರ್ವಾಸನೆಯಿಂದ ಕೂಡಿವೆ.

ADVERTISEMENT

ತಾಲ್ಲೂಕಿನ ದೊಡ್ಡಪನ್ನಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಸಮರ್ಪಕವಾಗಿಲ್ಲದ್ದಕ್ಕೆ ಮಕ್ಕಳು ಬಯಲನ್ನು ಆಶ್ರಯಿಸುವಂತಾಗಿದೆ.

ಕುಂದರಸನಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ಚಾವಣಿ ಉದುರಿರುವುದು
ಸಾಕರಸನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಸ್ಥಿತಿ

ಶಾಲೆ ದುರಸ್ತಿಗೊಳಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಉದುರುತ್ತಿದ್ದು ಮಕ್ಕಳು ಆತಂಕದಿಂದ ಪಾಠ ಕೇಳುವಂತಾಗಿದೆ. ಹಾಗಾಗಿ ಕೂಡಲೇ ದುರಸ್ತಿಗೊಳಿಸಬೇಕು

- ಸಂಪಂಗಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ

ಶಿಕ್ಷಕರ ನೇಮಕಾತಿಯಾಗಲಿ ಗ್ರಾಮೀಣ ಭಾಗದ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರವು ಶಿಕ್ಷಕರ ನೇಮಕಾತಿ ಮಾಡಬೇಕು

- ಸುರೇಶ್ ಬಾಬು ಪೋಷಕ

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಿಥಿಲಾವ್ಯವಸ್ಥೆಯಲ್ಲಿರುವ ಎಲ್ಲಾ ಶಾಲೆಗಳಿಗೆ ಶೀಘ್ರದಲ್ಲೇ ಹೊಸ ಶಾಲಾ ಕಟ್ಟಡ ನಿರ್ಮಿಸಲು ಸೂಕ್ತ ಕ್ರಮ ವಹಿಸುತ್ತೇವೆ.

- ಸುಕನ್ಯಾ ಕ್ಷೇತ್ರ ಶಿಕ್ಷಣಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.