ADVERTISEMENT

‘ಅಕ್ರಮ ಪರಭಾರೆಯಾದ 396 ಆಸ್ತಿ ಪತ್ತೆ’

ಕುಂದುಕೊರತೆ, ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ವೈ. ನಂಜೇಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:28 IST
Last Updated 18 ಸೆಪ್ಟೆಂಬರ್ 2024, 14:28 IST
ಮಾಲೂರು ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂದು- ಕೊರತೆ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ , ಪುರಸಭೆ ಮುಖ್ಯಾಧಿಕಾರಿಗಳಾದ ಪ್ರದೀಪ್‌ ಕುಮಾರ್‌, ನವೀನ್‌ ಚಂದ್ರಇದ್ದಾರೆ.
ಮಾಲೂರು ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂದು- ಕೊರತೆ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ , ಪುರಸಭೆ ಮುಖ್ಯಾಧಿಕಾರಿಗಳಾದ ಪ್ರದೀಪ್‌ ಕುಮಾರ್‌, ನವೀನ್‌ ಚಂದ್ರಇದ್ದಾರೆ.   

ಮಾಲೂರು: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ₹300 ಕೋಟಿಗೂ ಹೆಚ್ಚು ಮೌಲ್ಯದ 396 ಆಸ್ತಿಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಖಾತೆಯಾದ ಪುರಸಭೆಯ ಸಿಎ ನಿವೇಶನಗಳು ಮತ್ತು ಇತರೆ ಆಸ್ತಿಯನ್ನು ಶೀಘ್ರವೇ ವಶಕ್ಕೆ ಪಡೆಯಲಾಗುವುದು ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದು–ಕೊರತೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಅಕ್ರಮವಾಗಿ ಆಸ್ತಿ ಪರಭಾರೆ ಮಾಡಿಕೊಂಡವರ ಪೈಕಿ 173 ಹೆಸರುಗಳನ್ನು ಪತ್ತೆ ಹಚ್ಚಲಾಗಿದ್ದು, ಉಳಿದವರ ಹೆಸರು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಇದೇ 20ರಂದು ನಡೆಯುವ ಪುರಸಭೆ ಸಾಮಾನ್ಯ ಸಭೆಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಸೂಚಿಸಿದ್ದಾರೆ.

ADVERTISEMENT

ಪಟ್ಟಣದಲ್ಲಿ ಈವರೆಗೆ 396 ಸಿ.ಎ ನಿವೇಶನಗಳು ಹಾಗೂ ಪಟ್ಟಣದಲ್ಲಿರುವ ಸರ್ವೇ ಸಂಖ್ಯೆ ಜಮೀನುಗಳಿಗೂ ಅಕ್ರಮ ಖಾತೆ ಮಾಡಿರುವುದನ್ನು ಗುರುತಿಸಲಾಗಿದೆ. ಅಕ್ರಮ ಖಾತೆ ರದ್ದುಗೊಳಿಸುವ ಜೊತೆಗೆ  ಅಕ್ರಮ ಜಾಗಗಳ ಹರಾಜಿಗೆ ಅವಕಾಶ ನೀಡುವಂತೆ ಅಗ್ರಹಿಸಿ ಜಿಲ್ಲಾಧಿಕಾರಿಗೆ ಪುರಸಭೆಯ ಸರ್ವ ಸದಸ್ಯರ ಸಭೆ ಒಕ್ಕೂರಲಿನ ನಡವಳಿಕೆ ಹಾಗೂ ವರದಿ ಕಳುಹಿಸಲಾಗುವುದು ಎಂದರು.

ಪ್ರಾಧಿಕಾರ ವ್ಯಾಪ್ತಿಗೆ 4 ಹೋಬಳಿ: ಪಟ್ಟಣ, ಕಸಬಾ ಹಾಗೂ ಲಕ್ಕೂರು ಹೋಬಳಿಯ ಶೇ 80ರಷ್ಟು ಪ್ರದೇಶ ಮಾತ್ರ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ತಾಲ್ಲೂಕಿನ ನಾಲ್ಕು ಹೋಬಳಿಗಳನ್ನು ಮಾಲೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲು ಸರ್ಕಾರದ ಜೊತೆಗೆ ಚರ್ಚಿಸಲಾಗಿದ್ದು, ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ. ಇದರಿಂದ ಪ್ರಾಧಿಕಾರದ ಆದಾಯ ನಾಲ್ಕು ಪಟ್ಟು ಹೆಚ್ಚಲಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌, ನವೀನ್‌ ಚಂದ್ರ, ಪ್ರಾಧಿಕಾರ ಅಧ್ಯಕ್ಷ ಅಹಮದ್ ನಯುಂ, ಕಾರ್ಯದರ್ಶಿ ಕೃಷ್ಣಪ್ಪ, ಇನ್‌ಸ್ಪೆಕ್ಟರ್‌ ವಸಂತ್‌ ಕುಮಾರ್‌, ಮಂಜುನಾಥ್‌, ರಾಜಪ್ಪ, ವೆಂಕಟೇಶ್, ಇಮ್ತಿಯಾಜ್, ಮಂಜುನಾಥ್(ಜಾಕಿ), ಸುರೇಶ್ ಭಾಗವಹಿಸಿದ್ದರು.

ಪುರಸಭೆಗೆ ₹300 ಕೋಟಿ ಅದಾಯ

ಅಕ್ರಮ ಆಸ್ತಿಗಳ ಹರಾಜಿನಿಂದ ಪುರಸಭೆಗೆ ₹300 ಕೋಟಿ ಆದಾಯ ಹರಿದು ಬರಲಿದ್ದು ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ  ಚರ್ಚಿಸಲಾಗಿದ್ದು ಸಕರಾತ್ಮಕವಾಗಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.

ಪಟ್ಟಣದಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಟು ಅಂತಸ್ತು ಕಟ್ಟಿರುವ ಕಟ್ಟಡಗಳ ಮಾಲೀಕರಿಗೆ ದಂಡ ವಿಧಿಸಬೇಕು. ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.