ADVERTISEMENT

ಮಾಲೂರು: ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲೆ

ವಿ.ರಾಜಗೋಪಾಲ್
Published 27 ಜೂನ್ 2024, 5:58 IST
Last Updated 27 ಜೂನ್ 2024, 5:58 IST
   

ಮಾಲೂರು: ಬಿರುಕು ಬಿಟ್ಟ ಗೋಡೆಗಳು, ಕುಸಿಯುವ ಹಂತದಲ್ಲಿ ಕಟ್ಟಡದ ಚಾವಣಿ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು ... ಇದು ತಾಲ್ಲೂಕಿನ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪನಮಾಕನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ.

ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಸುಮಾರು 26 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶಾಲೆಯಲ್ಲಿರುವ ಎರಡು ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಯಾವ ಸಂದರ್ಭದಲ್ಲಿ ಬೇಕಾದರೂ ಕಟ್ಟಡ ನೆಲಕಚ್ಚಬಹುದು. ಈ ಶಾಲೆಯಲ್ಲಿ ತೀರಾ ಬಡಮಕ್ಕಳು ಓದುತ್ತಿದ್ದು, ಪೋಷಕರು ಆತಂಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಸ್ವಲ್ಪ ಮಳೆ ಬಂದರೂ ಚಾವಣಿ ಸೋರುತ್ತಿದ್ದು, ಮಕ್ಕಳು ಕುಳಿತುಕೊಳ್ಳಲು ಜಾಗವಿರುದಿಲ್ಲ. ಚಾವಣಿಗೆ ಚಪ್ಪಡಿ ಕಲ್ಲುಗಳನ್ನು ಹಾಸಲಾಗಿದೆ. ಈಗಾಗಲೇ ಕೆಲವು ಗೋಡೆಗಳು ಕುಸಿದಿದ್ದು, ಮಳೆ ಬಂದರೆ ಮಕ್ಕಳು ಶಾಲೆಗೆ ಬರುವುದೇ ಇಲ್ಲ. ಹಾಗಾಗಿ ಶಿಕ್ಷಕರು ಶಾಲೆಗಗೆ ಬಂದು ವಾಪಸ್ಸಾಗಬೇಕಾಗಿದೆ.

ADVERTISEMENT

ನೂತನ ಕಟ್ಟಡ ನಿರ್ಮಿಸಲು ಮುಖ್ಯ ಶಿಕ್ಷಕರು ಈಗಾಗಲೇ ಮನವಿ ಮಾಡಿದ್ದಾರೆ. ಪ್ರಯೋಜನವಾಗಿಲ್ಲ.
ಬಡವರು ಹೆಚ್ಚು ದಾಖಲಾಗಿರುವ ಶಾಲೆಗಳಿಗೆ ಸೌಕರ್ಯ ಕೊರತೆ ಇದ್ದು, ಸೌಲಭ್ಯ ಒದಗಿಸಲು ಪೋಷಕರು
ಆಗ್ರಹಿಸಿದ್ದಾರೆ.

ಮಳೆ ಬಂದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಮಳೆ ನೀರು ಕೊಠಡಿಗಳಲ್ಲಿ ತುಂಬಿಕೊಳ್ಳುವುದರಿಂದ ಮಕ್ಕಳು ಕುಳಿತು ಪಾಠ ಕೇಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೊಠಡಿಗಳ ದುರಸ್ತಿಯಾಗಬೇಕು.
ಯಲ್ಲಪ್ಪ, ಮುಖ್ಯ ಶಿಕ್ಷಕ
ಪನಮಾಕನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿಗೆ ಈಗಾಗಲೇ ತಾಲ್ಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಅದಷ್ಟು ಬೇಗ ಶಾಲಾ ಕಟ್ಟಡ ದುರಸ್ತಿಗೊಳಿಸಲಾಗುವುದು.
ಚಂದ್ರಕಲಾ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.