ADVERTISEMENT

ಬಂಗಾರಪೇಟೆ: ಪಾದಚಾರಿ ಮಾರ್ಗದ ಅಭಿವೃದ್ಧಿಗೆ ₹7.5 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:02 IST
Last Updated 28 ಅಕ್ಟೋಬರ್ 2024, 14:02 IST
ಬಂಗಾರಪೇಟೆ ಪಟ್ಟಣದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೋಮವಾರ ಪ್ರದಕ್ಷಣೆ ಮಾಡಿದರು
ಬಂಗಾರಪೇಟೆ ಪಟ್ಟಣದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೋಮವಾರ ಪ್ರದಕ್ಷಣೆ ಮಾಡಿದರು   

ಬಂಗಾರಪೇಟೆ: ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ₹7.5 ಕೋಟಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು. 

ಸೋಮವಾರ ನಗರ ಪ್ರದಕ್ಷಣೆ ಮಾಡಿದ ಅವರು, ‘ನಗರದಲ್ಲಿ ಹಲವು ಸಮಸ್ಯೆಗಳು ಕಂಡುಬಂದಿವೆ. ನಗರದ ಸೌಂದರ್ಯವಾಗಿ ಇಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಗರದಲ್ಲಿರುವ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಪರಿಶೀಲನೆ ಮಾಡಲು ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ತಂಡ ಬರಲಿದ್ದು, ಅವರು ಕ್ರಮ ಕೈಗೊಳ್ಳಲಿದ್ದಾರೆ. ಆ ಬಳಿಕ ಮುಖ್ಯ ರಸ್ತೆಗಳಾದ ಮಾದಯ್ಯ ರಸ್ತೆ, ಓಸ್ವಲ್ ಆಸ್ಪತ್ರೆ ರಸ್ತೆ, ಬಜಾರ್ ರಸ್ತೆ ಮತ್ತು ನಂದಿ ಮೆಡಿಕಲ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. 

ADVERTISEMENT

ಮುಂಜಾನೆ ನಗರ ಪ್ರದಕ್ಷಣೆ ವೇಳೆ ಅನೇಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ನಗರದ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶ ಎಂದರು. 

ಈ ವೇಳೆ ಪುರಸಭೆ ಅಧ್ಯಕ್ಷ ಬಿ. ಎಂ. ಗೋವಿಂದ, ಸದಸ್ಯರಾದ ಅರುಣಾಚಲಂ ಮಣಿ, ಎಸ್. ವೆಂಕಟೇಶ್, ಶೇಖರ್, ವೆಂಕಟೇಶ್, ಯುವರಾಜ್, ರವಿ ಇದ್ದರು.

ಬಂಗಾರಪೇಟೆ ಪಟ್ಟಣದ ಪ್ರದರ್ಶನ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.