ADVERTISEMENT

ಪುಲ್ವಾಮಾ ದಾಳಿ: ಉಗ್ರರಿಗೆ ತಕ್ಕ ಉತ್ತರ ಎಂದ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 15:57 IST
Last Updated 14 ಫೆಬ್ರುವರಿ 2021, 15:57 IST

ಕೋಲಾರ: ‘ಪುಲ್ವಾಮಾ ದಾಳಿ ಪ್ರಕರಣದಲ್ಲಿ ಭಾರತವು ಉಗ್ರರಿಗೆ ತಕ್ಕ ಉತ್ತರ ನೀಡಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪುಲ್ವಾಮಾದಲ್ಲಿ ದೇಶದ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರಿಗೆ ಭಾರತವು ಹಿಂದಿರುಗಿಸಿ ಒದೆಯುತ್ತದೆ ಎಂಬುದು ಗೊತ್ತಿರಲಿಲ್ಲ’ ಎಂದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿ ದಾಳಿ ನಡೆಸಿದಾಗ ಮೌನವಾಗಿದ್ದಂತೆ ಈಗಿನ ಸರ್ಕಾರವೂ ಇರುತ್ತದೆ ಎಂದು ಉಗ್ರರು ಭಾವಿಸಿದ್ದರು. ಹೀಗಾಗಿ ಉಗ್ರರ ಸೊಕ್ಕು ಹೆಚ್ಚಿತ್ತು. ಆದರೆ, ನಮ್ಮ ಬಿಜೆಪಿ ಸರ್ಕಾರ ಪುಲ್ವಾಮಾದಲ್ಲಿ ದಾಳಿ ನಡೆದ ತಕ್ಷಣವೇ ಉಗ್ರರಿಗೆ ಪ್ರತ್ಯುತ್ತರ ನೀಡಿತು’ ಎಂದು ಗುಡುಗಿದರು.

ADVERTISEMENT

‘ದೇಶದ ಸೈನಿಕರು ಒಂದೇ ರಾತ್ರಿಯಲ್ಲಿ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದರು. ಉಗ್ರರ ಭ್ರಮೆ ಕಳಚಿ ತಕ್ಕ ಪಾಠ ಕಲಿಸಿದರು. ಪುಲ್ವಾಮಾ ಪ್ರಕರಣದ ನಂತರ ಪಾಕಿಸ್ತಾನದ ಭಯೋತ್ಪಾದಕರು ಭಾರತದತ್ತ ಮುಖ ಮಾಡಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.