ADVERTISEMENT

ಮುಳಬಾಗಿಲು | ಶ್ರೀಗಂಧ ಕಳ್ಳತನ: ವ್ಯಕ್ತಿಯ ‌ಮೇಲೆ ಅರಣ್ಯಾಧಿಕಾರಿ ಫೈರಿಂಗ್, ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 6:40 IST
Last Updated 2 ಜುಲೈ 2024, 6:40 IST
<div class="paragraphs"><p>ಆರೋಪಿ ಬತ್ಯಪ್ಪ</p></div>

ಆರೋಪಿ ಬತ್ಯಪ್ಪ

   

ಮುಳಬಾಗಿಲು (ಕೋಲಾರ): ತಾಲ್ಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಹಲ್ಲೆ ನಡೆಸಲು ಮುಂದಾದಾಗ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ್ದಾರೆ.

ಆರೋಪಿ, ತಾಯಲೂರು ಗ್ರಾಮದ ಬತ್ಯಪ್ಪ (25) ಎಂಬುವವರ ಕಾಲಿಗೆ ಗುಂಡು ತಾಗಿದ್ದು, ಆತನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ.

ADVERTISEMENT

ಗಾಯಾಳು ಆರೋಪಿಯನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅರಣ್ಯ ಗಸ್ತು ಅಧಿಕಾರಿ ಅನಿಲ್ ಸಿದ್ಧರಾಮ ಪರೀಟ ಅವರು ಹಲ್ಲೆ ನಡೆಸಿದ ಕಳ್ಳರ ಮೇಲೆ ಆತ್ಮರಕ್ಷಣೆಗಾಗಿ ಹಾಗೂ ಕಳ್ಳತನ ತಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ.

ಪರಾರಿಯಾಗಿರುವ ಇನ್ನುಳಿದ ಆರೋಪಿಗಳಾದ ಸೀನಪ್ಪ (30), ರವಿ (25), ಸುರೇಶ್, ಸೀನಪ್ಪ (30) ಹಾಗೂ ಮಹೇಂದ್ರ (35) ಎಂಬುವರ ಪತ್ತೆಗೆ ಬಲೆ ಬೀಸಿದ್ದಾರೆ.

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.