ಮುಳಬಾಗಿಲು: ನಗರದಲ್ಲಿ ಹೆಚ್ಚು ವಾಹನ ಸಂಚಾರ ಹಾಗೂ ಜನದಟ್ಟಣೆ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲು ಅಧಿಕಾರಿಗಳು ಬುಧವಾರ ಸ್ಥಳ ಗುರುತು ಮಾಡಿದರು.
ನಗರದ ಕೆಇಬಿ ವೃತ್ತ, ಸೌಂದರ್ಯ ಸರ್ಕಲ್, ಮುತ್ಯಾಲಪೇಟೆ ಹಾಗೂ ಬಜಾರು ರಸ್ತೆ ವೃತ್ತಗಳಲ್ಲಿ ಹೆಚ್ಚು ವಾಹನ ಸಂಚಾರವಾಗುವುದರಿಂದ ನಗರಸಭೆ ಪೌರಾಯುಕ್ತ ವಿ.ಶ್ರೀಧರ್, ಡಿವೈಎಸ್‌ಪಿ ಡಿ.ಸಿ.ನಂದಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್ ಎಚ್.ಎಂ.ಶಿವಕುಮಾರ್ ಸ್ಥಳ ಪರಿಶೀಲಿಸಿ ಶೀಘ್ರ ಸಿಗ್ನಲ್ ಲೈಟ್ ಅಳವಡಿಸಲು ಸೂಚಿಸಿದರು.
ಮುಳಬಾಗಿಲು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ದಿನೇ ದಿನೇ ಜನದಟ್ಟಣೆ ಹೆಚ್ಚಾಗಿ ವಾಹನ ಸಂಚಾರ ಹೆಚ್ಚಾಗಿದೆ. ಹಾಗಾಗಿ ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೆಇಬಿ ವೃತ್ತ ಹಾಗೂ ಮುತ್ಯಾಲಪೇಟೆ ರಸ್ತೆಗಳಲ್ಲಿ ಹಬ್ಬ, ಮೆರವಣಿಗೆ ಮತ್ತಿತರ ಸಮಯದಲ್ಲಿ ವಾಹನ ದಟ್ಟಣೆ ನಿವಾರಣೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಟ್ರಾಫಿಕ್ ಸಿಗ್ನಲ್ ಅಳವಡಿಕೆ ನಂತರ ಬ್ಯಾರಿಕೇಡ್ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿವೈಎಸ್‌ಪಿ ಡಿ.ಸಿ.ನಂದಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.