ಕೋಲಾರ: ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ವೇಸ್ಟ್ ಡಿಕಂಪೋಸರ್ ಬಳಕೆ ವಿಧಾನ ಮತ್ತು ಅದರ ಸದುಪಯೋಗ ಕುರಿತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ರೈತ ಮಹಿಳೆಯರಿಗೆ ಇಲ್ಲಿ ಮಂಗಳವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಿ.ಎಸ್.ಅಂಬಿಕಾ, ‘ಮಹಾತ್ಮ ಗಾಂಧೀಜಿ ಸ್ವಚ್ಛ ಭಾರತದ ಕನಸ್ಸು ಕಂಡಿದ್ದರು. ಆ ಕನಸ್ಸು ಸಾಕಾರಗೊಳಿಸಲು ಸರ್ಕಾರ ವಿವಿಧ ಕಾರ್ಯಕ್ರಮ ರೂಪಿಸಿದ್ದು, ಇದರಲ್ಲಿ ಸ್ವಚ್ಛತಾ ಕ್ರಿಯಾ ಯೋಜನೆ ಒಂದಾಗಿದೆ’ ಎಂದು ಹೇಳಿದರು.
ಕೃಷಿ ವಿಜ್ಞಾನಿ ಜ್ಯೋತಿ ಅವರು ಕೈ ತೋಟ, ತಾರಸಿ ತೋಟದ ಉಪಯೋಗಗಳು ಮತ್ತು ತೋಟ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷಿತ ಕೀಟ ನಾಶಕಗಳ ಬಳಕೆ ಬಗ್ಗೆ ವಿವರ ನೀಡಲಾಯಿತು.
ವಿವಿಧ ಔಷಧ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ತೋರಿಸಿ ಅವುಗಳ ದೈನಂದಿನ ಬಳಕೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಮಾಡಿದರು. ವೇಸ್ಟ್ ಡಿಕಂಪೋಸರ್ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಹವಾಮಾನ ತಜ್ಞೆ ಸ್ವಾತಿ ಹವಾಮಾನ ಇಲಾಖೆಯ ಆ್ಯಪ್‌ಗಳನ್ನು ಪರಿಚಯಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಮ್, 25ಕ್ಕೂ ಹೆಚ್ಚು ರೈತ ಮಹಿಳೆಯರು, ವಿಜ್ಞಾನಿಗಳು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.