ADVERTISEMENT

ತಾಯಿ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 14:23 IST
Last Updated 22 ಆಗಸ್ಟ್ 2024, 14:23 IST
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಸಸಿ ನೆಡುವ ಮೂಲಕ‌ ಅಧಿಕಾರಿಗಳು ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ ನೀಡಿದರು
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಸಸಿ ನೆಡುವ ಮೂಲಕ‌ ಅಧಿಕಾರಿಗಳು ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ ನೀಡಿದರು   

ಮುಳಬಾಗಿಲು: ತಾಯಿ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ಎಂಬ ಕೇಂದ್ರ ಸರ್ಕಾರದ ವಿಶಿಷ್ಟ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಆರ್.ರವಿಚಂದ್ರ ಗುರುವಾರ ತಾಲ್ಲೂಕು ಪಂಚಾಯತಿ ಕಚೇರಿಯ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಮರಗಳನ್ನು ನೆಡುವುದು ಹಾಗೂ ಭೂಮಿಯ ಅವನತಿಯನ್ನು ತಡೆಯುವುದು ಅಭಿಯಾನದ ಮೂಲ ಉದ್ದೇಶವಾಗಿದ್ದು 2024 ಸೆಪ್ಟೆಂಬರ್ ತಿಂಗಳ ಒಳಗೆ ಇಡೀ ದೇಶಾದ್ಯಂತ 80 ಕೋಟಿ ಗಿಡಗಳನ್ನು ಹಾಗೂ 2025 ರ ಮಾರ್ಚ್ ವೇಳೆಗೆ 140 ಕೋಟಿ ಸಸಿಗಳನ್ನು ನಾಟಿ ಮಾಡುವುದು ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಹೇಳಿದರು.

ಇಂದಿನ ಜಾಗತೀಕರಣ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರಿಕೀಕರಣ, ಹೆದ್ದಾರಿಗಳು ಮತ್ತಿತರ ನಾನಾ ಯೋಜನೆಗಳಿಂದಾಗಿ ಕೋಟ್ಯಾಂತರ ಮರಗಿಡಗಳು ತಮಗರಿವಿಲ್ಲದೆಯೇ ನಾಶವಾಗುತ್ತಿವೆ.ಅದೂ ಅಲ್ಲದೆ ಮನುಷ್ಯನ ದುರಾಸೆಯಿಂದಾಗಿ ಮರ ಗಿಡಗಳನ್ನು ನಾಶ ಮಾಡುತ್ತಲೇ ಬರುತ್ತಿದ್ದೇವೆ.ಹೀಗಾಗಿ ಪರಿಸರದ ಮರು ಸೃಷ್ಟಿ ಅತ್ಯವಸರ ಎಂದು ತಿಳಿಸಿದರು.

ADVERTISEMENT

ನರೇಗಾ ಸಹಾಯಕ ನಿರ್ದೇಶಕ ಆರ್.ರವಿಚಂದ್ರ ಮಾತನಾಡಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ( ಏಕ್ ಪೇಡ್ ಮಾ ಕೆ ನಾಮ್) ಕಾರ್ಯಕದ ಅಡಿಯಲ್ಲಿ ಮರ ಗಿಡಗಳನ್ನು ನೆಡುವ ಮೂಲಕ ಬರ ನಿರ್ಮೂಲನೆ ಹಾಗೂ ಭೂಮಿ ಮರುಭೂಮಿಯಾಗುವುದನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಒಗ್ಗೂಡಿಸುವಿಕೆಯೊಂದಿಗೆ ಅಭಿಯಾನದ ಅಂಗವಾಗಿ ಎಲ್ಲಾ ಗ್ರಾಮ ಪಂಚಾಯತಿಗಳು ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕ ಜೆ.ವರದರಾಜುಲು, ನರೇಗಾ ತಾಲ್ಲೂಕು ತಾಂತ್ರಿಕ ಸಂಯೋಜಕಿ ತೇಜಸ್ವಿನಿ, ಚಂದ್ರು, ಚೈತ್ರ, ವಿನೋದ್, ಭವ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.