ADVERTISEMENT

ಮೂಲ ವಿಜ್ಞಾನ ಬೆಳೆಸುವ ಯತ್ನ

ಮಲ್ಲಿಕಾರ್ಜುನ
Published 5 ಸೆಪ್ಟೆಂಬರ್ 2013, 6:11 IST
Last Updated 5 ಸೆಪ್ಟೆಂಬರ್ 2013, 6:11 IST

ಕಾರಟಗಿ: ಇಲ್ಲಿನ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕ ಗುರುಬಸಪ್ಪ ಶರಭಪ್ಪ ಪಟ್ಟಣಶೆಟ್ಟಿ ಅವರು ಕರ್ತವ್ಯದ ಜತೆ ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು 1998, 2003, 2013ರ ಫೆ. 5, 6ರಂದು ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿ, ಎಲ್ಲರ ಗಮನ ಸೆಳೆದಿದ್ದಲ್ಲದೇ, ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದ್ದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ನೆರವಿನೊಂದಿಗೆ ಪ್ರತಿ ಶನಿವಾರ ಒಂದು ಶಾಲೆಯಲ್ಲಿ `ಮೂಲ ವಿಜ್ಞಾನ' ಕಾರ್ಯಕ್ರಮ ಆರಂಭಿಸಿದ್ದಾರೆ.

ಕಾರ್ಯಕ್ರಮವನ್ನು ಸೇವೆ ಮುಗಿದರೂ ಮುಂದುವರಿಸಬೇಕೆಂಬ ಬಯಕೆ ಇದೆ ಎನ್ನುವ ಶಿಕ್ಷಕ ಗುರುಬಸಪ್ಪ ಪಟ್ಟಣಶೆಟ್ಟಿ ನಮ್ಮದೆ ವಾಹನದಲ್ಲಿ ಸಂಚಾರಿ ವಿಜ್ಞಾನ ವಸ್ತುಪ್ರದರ್ಶನವನ್ನು ಮಾಡಬೇಕೆಂಬ ಹೆಬ್ಬಯಕೆ ಇದೆ ಎನ್ನುತ್ತಾರೆ.

ಮೂಲವಿಜ್ಞಾನ ಕಾರ್ಯಕ್ರಮದಿಂದ ವೈಜ್ಞಾನಿಕತೆ ಬೆಳೆಸುವುದರೊಂದಿಗೆ, ಗ್ರಾಮೀಣ ಆಚರಣೆಗಳು ವೈಜ್ಞಾನಿಕ ನೆಲೆಯಲ್ಲಿರುವುದರ ಪರಿಚಯ ಮಾಡಿಕೊಡುತ್ತಿದ್ದಾರೆ.

ಈಗಾಗಲೆ ಗುರುಬಸಪ್ಪಗೆ 2004ರಲ್ಲಿ ಗಂಗಾವತಿ ತಾಲ್ಲೂಕು ಉತ್ತಮ ಶಿಕ್ಷಕ, 2011ರಲ್ಲಿ ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕ, ಚಿತ್ರದುರ್ಗದ ಪುಟಾಣಿ ವಿಜ್ಞಾನ ಸಂಸ್ಥೆ ವಿಜ್ಞಾನ ಮಿತ್ರ ಪ್ರಶಸ್ತಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.