ಕೊಪ್ಪಳ: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಗಿಣಿಗೇರಾ-ರಾಯಚೂರು (ಮುನಿರಾಬಾದ್-ಮಹಿಬೂಬನಗರ) ರೈಲ್ವೆ ಕಾಮಗಾರಿಗೆ ₹300 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಗದಗ (ತಳಕಲ್)- ವಾಡಿ ಕಾಮಗಾರಿಗೆ ₹350 ಕೋಟಿ, ಕೊಪ್ಪಳ ಮತ್ತು ಹುಲಗಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಮೃತ ಭಾರತ ಯೋಜನೆಯಡಿ ಕಾಮಗಾರಿ ನಡೆಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಗೇಟ್ ಸಂಖ್ಯೆ 66ರ ಕುಷ್ಟಗಿ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿಗೆ ₹5 ಕೋಟಿ, ಗಿಣಗೇರಾ ಗೇಟ್ ಬಳಿ ಮೇಲ್ಸೇತುವೆಗೆ ₹4 ಕೋಟಿ ಮತ್ತು ಹುಲಗಿ ಗೇಟ್ ಮೇಲ್ಸೇತುವೆಗೆ ₹3 ಕೋಟಿ ನೀಡಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.