ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮ ಪಂಚಾಯಿತಿಗೆ ಗುರುವಾರ ಎಸಿಬಿ ಅಧಿಕಾರಿಗಳು ಏಕಾಏಕಿ ಭೇಟಿ ನೀಡಿ, ಭ್ರಷ್ಟಾಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮೇಲೆ ದಾಳಿ ನಡೆಸಿದ್ದಾರೆ.
ಸಂಗಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ಬಂಡಿ ಬಸಪ್ಪ ಕ್ಯಾಂಪ್ ಗ್ರಾಮದ ನಿವಾಸಿ ವಿಜಯ ಕುಮಾರ್ ಅವರ ಮನೆಗೆ 11 ಬಿ ಫಾರಂ ನೀಡಲು ಗ್ರಾ.ಪಂ ಪಿಡಿಓ ₹6 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು. ಅದರಂತೆ ಗುರವಾರ ಬಂಡಿ ಬಸಪ್ಪ ಕ್ಯಾಂಪಿನ ನಿವಾಸಿಯನ್ನು ಕರೆಯಿಸಿಕೊಂಡು ಗ್ರಾ.ಪಂ ಕಚೇರಿಯಲ್ಲಿ ಪಿಡಿಒ ಲಂಚ ಸ್ವೀಕರಿಸುವಾಗ ಕೊಪ್ಪಳ ಎಸಿಬಿ ಎಸ್ಪಿ ಹರಿಬಾಬು ಹಾಗೂ ಶಿವಕುಮಾರ್ ನೇತೃತ್ವದಲ್ಲಿನ ತಂಡ ದಾಳಿ ನಡೆಸಿದೆ.
ನಂತರ ದಾಳಿಯಲ್ಲಿ ಸಿಕ್ಕಿಬಿದ್ದ ಪಿಡಿಒ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರ್ ಉಲ್ಲಕ್ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.